Asianet Suvarna News Asianet Suvarna News

2022ರ ಕಾಮನ್ವೆಲ್ತ್‌ಗೆ ಭಾರತ ಬಹಿಷ್ಕಾರ?

ಪ್ರತಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿ ಗರಿಷ್ಠ ಪದಕ ಗೆದ್ದುಕೊಂಡಿದೆ. ಇತರ ಕ್ರೀಡಾಕೂಟಗಳಿಗೆ ಹೋಲಿಸಿದರೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪಾರಮ್ಯ ಹೆಚ್ಚಿದೆ. ಆದರೆ 2022ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಬಹಿಷ್ಕಾರ ಹಾಕಲು ಮುಂದಾಗಿದೆ. 
 

India likely to boycott 2022 commonwealth games
Author
Bengaluru, First Published Jul 28, 2019, 10:15 AM IST

ನವದೆಹಲಿ(ಜು.28): ಅನಿರೀಕ್ಷಿತ ಬೆಳವಣಿಗೆಯಲ್ಲಿ ಭಾರತೀಯ ಒಲಿಂಪಿಕ್‌ ಸಂಸ್ಥೆ (ಐಒಎ) ಶನಿವಾರ 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಬಹಿಷ್ಕಾರ ಹಾಕುವ ಪ್ರಸ್ತಾಪವನ್ನು ಕೇಂದ್ರ ಕ್ರೀಡಾ ಸಚಿವಾಲಯದ ಮುಂದಿಟ್ಟಿದ್ದು, ಸರ್ಕಾರದ ಅನುಮತಿ ಕೋರಿದೆ. ಕ್ರೀಡಾಕೂಟದಿಂದ ಶೂಟಿಂಗ್‌ ಕ್ರೀಡೆಯನ್ನು ಕೈಬಿಟ್ಟಿರುವ ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌(ಸಿಜಿಎಫ್‌) ವಿರುದ್ಧ ಐಒಎ ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: 2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌?

ಕ್ರೀಡಾ ಸಚಿವ ಕಿರೆನ್‌ ರಿಜಿಜುಗೆ ಐಒಎ ಅಧ್ಯಕ್ಷ ನರೇದ್ರ ಬಾತ್ರಾ ಪತ್ರ ಬರೆದಿದ್ದು, ಶೀಘ್ರದಲ್ಲೇ ಬಹಿಷ್ಕಾರ ಪ್ರಸ್ತಾಪದ ಕುರಿತು ಚರ್ಚೆ ನಡೆಸಲು ಸಭೆ ಕರೆಯುವಂತೆ ಮನವಿ ಮಾಡಿದ್ದಾರೆ. 2 ದಿನಗಳ ಹಿಂದಷ್ಟೇ ಐಒಎ, ಸೆಪ್ಟೆಂಬರ್‌ನಲ್ಲಿ ರವಾಂಡದಲ್ಲಿ ನಡೆಯಲಿರುವ ಸಿಜಿಎಫ್‌ ಸಾಮಾನ್ಯ ಸಭೆಯಿಂದ ಹಿಂದೆ ಸರಿದಿತ್ತು.

ಕಾರಣವೇನು?
ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತೀಯ ಶೂಟರ್‌ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. 2018ರ ಗೋಲ್ಡ್‌ಕೋಸ್ಟ್‌ ಗೇಮ್ಸ್‌ನಲ್ಲಿ ಶೂಟಿಂಗ್‌ನಲ್ಲೇ ಭಾರತ 16 ಪದಕ ಗೆದ್ದಿತ್ತು. ‘ಭಾರತಕ್ಕೆ ಹಿನ್ನಡೆಯಾಗಬೇಕು ಎನ್ನುವ ಕಾರಣದಿಂದಲೇ ಶೂಟಿಂಗ್‌ ಅನ್ನು ತೆಗೆದುಹಾಕಲಾಗಿದೆ. ಬೇಕಂತಲೇ ನಿಯಮಗಳನ್ನು ಬದಲಿಸಲಾಗಿದೆ’ ಎಂದು ಐಒಎ ಅಧ್ಯಕ್ಷ ಬಾತ್ರಾ ಹೇಳಿದ್ದಾರೆ.
 

Follow Us:
Download App:
  • android
  • ios