ಭಾರತದ ಆಟಗಾರರು ಶತಕ, ದ್ವಿಶತಕ ಮತ್ತು ತ್ರಿಶತಕಗಳಿಸಿದ್ದರೆ, ಇಂಗ್ಲೆಂಡ್ ಪರ ಮೊಯಿನ್ ಅಲಿ ಚೆನ್ನೈನಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ 146ರನ್‌ಗಳಿಸಿದ್ದೆ ಅತ್ಯಧಿಕ ವೈಯಕ್ತಿಕ ಗರಿಷ್ಠವಾಗಿದೆ.
ನವದೆಹಲಿ(ಡಿ.22): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಆರಂಭದಲ್ಲಿ ಭಾರತ ತಂಡ ಇಂತಹದ್ದೊಂದು ಸಾಧನೆ ಮಾಡಲಿದೆ ಎನ್ನುವ ನಿರೀಕ್ಷೆ ಇರಲಿಲ್ಲ. ಆದರೆ ಟೆಸ್ಟ್ ಸರಣಿಯ ಅಂತ್ಯದ ವೇಳೆಗೆ ಭಾರತ ತಂಡ, ಆಂಗ್ಲರನ್ನು ಅಂಕಿ-ಅಂಶಗಳಲ್ಲಿ ಹಿಂದಿಕ್ಕಿದೆ. 5 ಪಂದ್ಯಗಳ ಸರಣಿಯಲ್ಲಿ ಭಾರತ 4-0ಯಿಂದ ಇಂಗ್ಲೆಂಡ್ ಎದುರು ಗೆಲುವು ಪಡೆದಿದೆ. ಅದರಂತೆ ತವರಿನ ಅಂಗಣದಲ್ಲಿ ಭಾರತದ ಬ್ಯಾಟ್ಸ್ಮನ್ಗಳು ಸರಾಸರಿ 48.23ರಲ್ಲಿ ಬ್ಯಾಟ್ ಬೀಸಿದ್ದಾರೆ. ಇನ್ನು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು 31.08ರ ಸರಾಸರಿ ಹೊಂದಿದ್ದಾರೆ.
ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡದ ಆಟಗಾರರು 9 ಶತಕ ಮತ್ತು 21 ಅರ್ಧಶತಕಗಳಿಸಿದ್ದರೆ, ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು 6 ಶತಕ ಹಾಗೂ 22 ಅರ್ಧಶತಕ ಗಳಿಸಿದ್ದಾರೆ. ಭಾರತದ ಬ್ಯಾಟ್ಸ್ಮನ್ಗಳ ಶತಕದ ಸರಾಸರಿ ಗಾತ್ರ 189.12 ಆಗಿದ್ದರೆ, ಇಂಗ್ಲೆಂಡ್ ಬ್ಯಾಟ್ಸ್ಮನ್ಗಳದ್ದು 126.16ಕ್ಕೆ ಸಿಮೀತವಾಗಿದೆ.
ಭಾರತದ ಆಟಗಾರರು ಶತಕ, ದ್ವಿಶತಕ ಮತ್ತು ತ್ರಿಶತಕಗಳಿಸಿದ್ದರೆ, ಇಂಗ್ಲೆಂಡ್ ಪರ ಮೊಯಿನ್ ಅಲಿ ಚೆನ್ನೈನಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ 146ರನ್ಗಳಿಸಿದ್ದೆ ಅತ್ಯಧಿಕ ವೈಯಕ್ತಿಕ ಗರಿಷ್ಠವಾಗಿದೆ.
ಇನ್ನು ಭರವಸೆ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ 8 ಇನಿಂಗ್ಸ್ಗಳಲ್ಲಿ 109.16ರ ಸರಾಸರಿಯಲ್ಲಿ 2 ಶತಕ ಮತ್ತು 2 ಅರ್ಧಶತಕ ದಾಖಲಿಸಿದ್ದಾರೆ. ಕೊಹ್ಲಿ ಕೇವಲ 1 ಇನಿಂಗ್ಸ್ನಲ್ಲಿ ಮಾತ್ರ ವಿಫಲರಾಗಿದ್ದಾರೆ. ಇಂಗ್ಲೆಂಡ್ ತಂಡದ ಪರ ಜೋ ರೂಟ್ 491 ರನ್ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 5 ವೇಗದ ಅರ್ಧಶತಕ ದಾಖಲಾಗಿವೆ.
ಇನ್ನು ನಾಯಕ ಅಲಸ್ಟೇರ್ ಕುಕ್ 36.90ಯ ಸರಾಸರಿಯಲ್ಲಿ 369ರನ್ಗಳಿಸಿದ್ದಾರೆ. ಕಳೆದ ಬಾರಿ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕುಕ್ 80.28ರ ಸರಾಸರಿಯಲ್ಲಿ 562ರನ್ಗಳಿಸಿದ್ದರಲ್ಲದೇ, 3 ಶತಕಗಳನ್ನೂ ಸಿಡಿಸಿದ್ದರು.
