ಮೊದಲ ದಿನದಂತ್ಯಕ್ಕೆ ಇಂಡಿಯಾ ಗ್ರೀನ್ 100 ರನ್ ಗಳಿಸಿದ್ದು ಕೇವಲ 77 ರನ್ ಹಿನ್ನಡೆಯಲ್ಲಿದೆ.

ಕಾನ್ಪುರ(ಸೆ.19): ದುಲೀಪ್ ಟ್ರೋಫಿ 3ನೇ ಪಂದ್ಯದಲ್ಲಿ ಇಂಡಿಯಾ ಗ್ರೀನ್ ವಿರುದ್ಧ ಇಂಡಿಯಾ ಬ್ಲೂ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 177 ರನ್‌'ಗಳಿಗೆ ಸರ್ವಪತನಗೊಂಡಿದೆ.

ಪಂದ್ಯದ ಮೊದಲ ದಿನವಾದ ಇಂದು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಇಳಿದ ಸುರೇಶ್ ರೈನಾ ಪಡೆ, ಸ್ಪಿನ್ನರ್ ಪರ್ವೇಜ್ ರಸೂಲ್ ದಾಳಿಗೆ ನಲುಗಿತು. ಮನೋಜ್ ತಿವಾರಿ 78, ರೈನಾ 40 ರನ್ ಗಳಿಸಿದ್ದನ್ನು ಹೊರತುಪಡಿಸಿ ಉಳಿದೆಲ್ಲಾ ಬ್ಯಾಟ್ಸ್‌'ಮನ್‌'ಗಳು ವೈಫಲ್ಯ ಕಂಡರು. ರಸೂಲ್ 5 ವಿಕೆಟ್ ಕಬಳಿಸಿದರು.

ಮೊದಲ ದಿನದಂತ್ಯಕ್ಕೆ ಇಂಡಿಯಾ ಗ್ರೀನ್ 100 ರನ್ ಗಳಿಸಿದ್ದು ಕೇವಲ 77 ರನ್ ಹಿನ್ನಡೆಯಲ್ಲಿದೆ.

ಸಂಕ್ಷಿಪ್ತ ಸ್ಕೋರ್: ಇಂಡಿಯಾ ಬ್ಲೂ 177/10(ತಿವಾರಿ 78, ರೈನಾ 40, ರಸೂಲ್ 70/5)

ಇಂಡಿಯಾ ಗ್ರೀನ್ 100/3 (ಕೌಶಿಕ್ 39, ಇಶಾಂತ್ 15/1)