ಈ ಟೆಸ್ಟ್ ಸರಣಿ ಜಯಿಸಿದ್ದರಿಂದ ಭಾರತ 5 ಪಾಯಿಂಟ್ ಪಡೆದು 120 ಅಂಕಗಳೊಂದಿಗೆ ಮೊದಲ ಸ್ಥಾನಗಳಿಸಿದರೆ, 15 ಪಾಯಿಂಟ್‌'ಗಳ ಹಿನ್ನಡೆ ಅನುಭವಿಸಿರುವ ಆಸ್ಟ್ರೇಲಿಯಾ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ದುಬೈ(ಡಿ.20): ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯನ್ನು 4-0ಯಿಂದ ಜಯಿಸಿದ ಭಾರತ, ಇದರೊಂದಿಗೆ ವರ್ಷಾಂತ್ಯವನ್ನು ವಿಶ್ವ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನದೊಂದಿಗೆ ವಿದಾಯ ಹೇಳಿದೆ.
ಈ ಟೆಸ್ಟ್ ಸರಣಿ ಜಯಿಸಿದ್ದರಿಂದ ಭಾರತ 5 ಪಾಯಿಂಟ್ ಪಡೆದು 120 ಅಂಕಗಳೊಂದಿಗೆ ಮೊದಲ ಸ್ಥಾನಗಳಿಸಿದರೆ, 15 ಪಾಯಿಂಟ್'ಗಳ ಹಿನ್ನಡೆ ಅನುಭವಿಸಿರುವ ಆಸ್ಟ್ರೇಲಿಯಾ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇನ್ನು 102 ಅಂಕಗಳೊಂದಿಗೆ ಪಾಕಿಸ್ತಾನ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.
ಭಾರತ ವಿರುದ್ಧದ ಸರಣಿಯ ಆರಂಭದಲ್ಲಿ 2ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್ 101 ಅಂಕಗಳಿಂದ 5ನೇ ಸ್ಥಾನಕ್ಕೆ ಕುಸಿದಿದೆ.
