Asianet Suvarna News Asianet Suvarna News

ಐಸಿಸಿ ಟಿ20 ಶ್ರೇಯಾಂಕದಲ್ಲಿ 4ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ

ಭಾರತಕ್ಕಿಂತ ಮೂರು ಅಂಕ ಮುಂದಿರುವ ಪಾಕಿಸ್ತಾನ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ಕೇವಲ 95 ಅಂಕ ಹೊಂದಿರುವ ಶ್ರೀಲಂಕಾ ತಂಡ ಎಂಟನೇ ಸ್ಥಾನಕ್ಕೆ ತಳ್ಳಲ್ಪಟ್ಟು ಆಶ್ಚರ್ಯಚಕಿತರನ್ನಾಗಿಸಿದೆ.

India drop to No 4 in ICC T20 rankings

ದುಬೈ(ಮೇ.03): ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯ ನೂತನ ಟಿ-20 ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 4ನೇ ಸ್ಥಾನಕ್ಕೆ ಕುಸಿದಿದೆ.

ಒಟ್ಟು 6 ರೇಟಿಂಗ್‌ ಅಂಕಗಳನ್ನು ಕಳೆದುಕೊಳ್ಳುವ ಮೂಲಕ 2ನೇ ಸ್ಥಾನದಲ್ಲಿದ್ದ ಭಾರತ ಒಟ್ಟು 118 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಇನ್ನು 125 ಅಂಕಳೊಂದಿಗೆ ನ್ಯೂಜಿಲೆಂಡ್‌ ಅಗ್ರಸ್ಥಾನದಲ್ಲಿದ್ದರೆ, 121 ಅಂಕ ಗಳಿಸಿರುವ ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ. ಉಳಿದಂತೆ, ದಕ್ಷಿಣ ಆಫ್ರಿಕಾ 5, ಆಸ್ಪ್ರೇಲಿಯಾ 6, ವೆಸ್ಟ್‌ಇಂಡಿಸ್‌ 7, ಶ್ರೀಲಂಕಾ 8, ಆಫ್ಘಾನಿಸ್ತಾನ 9 ಹಾಗೂ ಬಾಂಗ್ಲಾದೇಶ 10ನೇ ಸ್ಥಾನದಲ್ಲಿವೆ.

ಭಾರತಕ್ಕಿಂತ ಮೂರು ಅಂಕ ಮುಂದಿರುವ ಪಾಕಿಸ್ತಾನ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟರೆ, ಕೇವಲ 95 ಅಂಕ ಹೊಂದಿರುವ ಶ್ರೀಲಂಕಾ ತಂಡ ಎಂಟನೇ ಸ್ಥಾನಕ್ಕೆ ತಳ್ಳಲ್ಪಟ್ಟು ಆಶ್ಚರ್ಯಚಕಿತರನ್ನಾಗಿಸಿದೆ.

ಹೀಗಿದೆ ಐಸಿಸಿ ಬಿಡುಗಡೆ ಮಾಡಿದ ನೂತನ ಶ್ರೇಯಾಂಕ ಪಟ್ಟಿ:

 

Follow Us:
Download App:
  • android
  • ios