ಟೀಂ ಇಂಡಿಯಾ ನೀಡಿದ್ದ 550 ರನ್'ಗಳ ಗುರಿಯನ್ನು 2ನೇ ಇನ್ನಿಂಗ್ಸ್'ನಲ್ಲಿ ಬೆನ್ನಟ್ಟಿದ ಲಂಕಾ ತಂಡದವರು 245 ರನ್'ಗಳಿಗೆ ತನ್ನೆಲ್ಲ ವಿಕೇಟ್ ಕಳೆದುಕೊಂಡು 304 ರನ್ನಗಳಿಂದ ಸೋಲನ್ನೊಪ್ಪಿಕೊಂಡರು.
ಗಾಲೆ(ಜು.29): ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 4 ದಿನಗಳಲ್ಲಿ ಮುಕ್ತಾಯಗೊಳಿಸಿ 304 ರನ್'ಗಳಿಂದ ಮಣಿಸಿದೆ. ಈ ಮೂಲಕ 3 ಟೆಸ್ಟ್'ಗಳ ಸರಣಿಯನ್ನು 1-0 ರಿಂದ ಮುನ್ನಡೆ ಸಾದಿಸಿದೆ.
ಟೀಂ ಇಂಡಿಯಾ ನೀಡಿದ್ದ 550 ರನ್'ಗಳ ಗುರಿಯನ್ನು 2ನೇ ಇನ್ನಿಂಗ್ಸ್'ನಲ್ಲಿ ಬೆನ್ನಟ್ಟಿದ ಲಂಕಾ ತಂಡದವರು 245 ರನ್'ಗಳಿಗೆ ತನ್ನೆಲ್ಲ ವಿಕೇಟ್ ಕಳೆದುಕೊಂಡು 304 ರನ್ನಗಳಿಂದ ಸೋಲನ್ನೊಪ್ಪಿಕೊಂಡರು.
ಒಂದು ಹಂತದಲ್ಲಿ ಆರಂಭಿಕ ಬ್ಯಾಟ್ಸ್'ಮೆನ್ ಕರುಣಾರತ್ನೆ(97:208 ಎಸೆತ,9 ಬೌಡರಿ) ಹಾಗೂ ದಿಕ್'ವೆಲ್ಲಾ(67: 94 ಎಸೆತ, 10 ಬೌಂಡರಿ) ಪ್ರತಿರೋಧ ತೋರಿದರಾದರೂ ಸ್ಪಿನ್ನರ್ ಅಶ್ವಿನ್' ಮೋಡಿಗೆ ವಿಕೇಟ್ ವಿಕೇಟ್ ಒಪ್ಪಿಸಿ ಪೆವಿಲಿಯನ್'ಗೆ ತೆರಳಿದರು. ಮಂಡೀಸ್(36) ಹಾಗೂ ಪೆರೇರಾ(21) ರನ್'ಗಳನ್ನು ಗಳಿಸಿದ್ದನ್ನು ಹೊರತು ಪಡಿಸಿದರೆ ಉಳಿದ ಬ್ಯಾಟ್ಸ್'ಮೆನ್'ಗಳ ಭಾರತದ ಬೌಲರ್'ಗಳಿಗೆ ಬಹುಬೇಗನೆ ವಿಕೇಟ್ ಒಪ್ಪಿಸಿದರು.
ಗಾಯದ ಸಮಸ್ಯೆಯಿಂದ 76.5 ಓವರ್'ಗಳಲ್ಲಿ ತಂಡ 8 ವಿಕೇಟ್ ನಷ್ಟಕ್ಕೆ 245 ಗಳಿಸಿದ್ದಾಗ ಬೌಲರ್'ಗಳಾದ ಹೆರಾತ್ ಹಾಗೂ ಗುಣರತ್ನೆ ಬ್ಯಾಟಿಂಗ್ ಮಾಡದ ಕಾರಣ ಸೋಲನ್ನೊಪ್ಪಿಕೊಳ್ಳಬೇಕಾಯಿತು. ಭಾರತದ ಪರ ಸ್ಪಿನ್ನರ್'ಗಳಾದ ರವೀಂದ್ರ ಜಡೇಜ 71/3, ಹಾಗೂ ಆರ್.ಅಶ್ವಿನ್ 65/3 ವಿಕೇಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.
ಶತಕದ ಮಿಂಚು ಹರಿಸಿದ ಕೊಹ್ಲಿ
ಎರಡನೇ ಇನ್ನಿಂಗ್ಸ್'ನಲ್ಲಿ ನಾಯಕ ವಿರಾಟ್ ಕೊಹ್ಲಿ 136 ಎಸೆತಗಳಲ್ಲಿ 5 ಸಿಕ್ಸ್'ರ್ ಹಾಗೂ 1 ಸಿಕ್ಸ್'ರ್'ನಿಂದ 103 ಹಾಗೂ ಅಭಿನವ್ ಮುಕುಂದ್ 116 ಎಸೆತಗಳಲ್ಲಿ 8 ಬೌಂಡರಿಗಳಿಂದ 81 ರನ್ ಗಳಿಸುವುದರೊಂದಿಗೆ ತಂಡ 3 ವಿಕೇಟ್ ನಷ್ಟಕ್ಕೆ 240 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡು ಶ್ರೀಲಂಕಾಕ್ಕೆ 550 ರನ್ ಟಾರ್ಗೆಟ್ ನೀಡಿದರು. ಮೊದಲ ಇನ್ನಿಂಗ್ಸ್'ನಲ್ಲಿ ಭರ್ಜರಿ 190 ರನ್ ಗಳಿಸಿದ್ದ ಶಿಖರ್ ಧವನ್ ಪಂದ್ಯ ಶ್ರೇಷ್ಠರಾದರು.
ಸ್ಕೋರ್
ಭಾರತ: 600 ಮತ್ತು 240/3 ಡಿಕ್ಲೇರ್ಡ್
ಶ್ರೀಲಂಕಾ: 291 ಹಾಗೂ 245
ಫಲಿತಾಂಶ: ಭಾರತಕ್ಕೆ 304 ರನ್'ಗಳ ಜಯ
ಸರಣಿ: 1-0 ಮುನ್ನಡೆ
ಪಂದ್ಯಶ್ರೇಷ್ಠ: ಶಿಖರ್ ಧವನ್
--
