Asianet Suvarna News Asianet Suvarna News

ಬಾಂಗ್ಲಾ'ವನ್ನು 84 ರನ್ನು'ಗಳಿಗೆ ಆಲ್'ಔಟ್ ಮಾಡಿದ ಭಾರತ

ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ್ದ  ಟೀಂ ಇಂಡಿಯಾ  2ನೇ ಪಂದ್ಯದಲ್ಲೂ ಉತ್ತಮ ಆಟವಾಡಿ 50 ಓವರ್‌ಗಳಲ್ಲಿ 7 ವಿಕೇಟ್ ನಷ್ಟಕ್ಕೆ 324 ರನ್ ಗಳಿಸಿತು. ಭಾರತದ ಪರ ಕಾರ್ತಿಕ್ 94, ಪಾಂಡ್ಯ 80, ಧವನ್ 60 ರನ್ ಗಳಿಸಿದರು.

india crush Bangladesh by 240 runs in warm up match
  • Facebook
  • Twitter
  • Whatsapp

ಲಂಡನ್(ಮೇ.31 ): ಬಾಂಗ್ಲಾದೇಶ ವಿರುದ್ಧ ನಡೆದ 2ನೇ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲ ತಂಡವನ್ನು 84 ರನ್'ಗಳಿಗೆ ಆಲ್'ಔಟ್ ಮಾಡಿ 240 ರನ್‌ಗಳ ಭಾರಿ ಅಂತರದ ಗೆಲುವು ಸಾಧಿಸಿತು.

ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ್ದ  ಟೀಂ ಇಂಡಿಯಾ  2ನೇ ಪಂದ್ಯದಲ್ಲೂ ಉತ್ತಮ ಆಟವಾಡಿ 50 ಓವರ್‌ಗಳಲ್ಲಿ 7 ವಿಕೇಟ್ ನಷ್ಟಕ್ಕೆ 324 ರನ್ ಗಳಿಸಿತು. ಭಾರತದ ಪರ ಕಾರ್ತಿಕ್ 94, ಪಾಂಡ್ಯ 80, ಧವನ್ 60 ರನ್ ಗಳಿಸಿದರು.

325 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಬಾಂಗ್ಲ 23.5 ಓವರ್‌ಗಳಲ್ಲಿ 84 ರನ್‌ಗಳಿಗೆ ಆಲ್'ಔಟ್ ಆಯಿತು. ವೇಗಿಗಳಾದ ಭುವನೇಶ್ವರ್ 3-13, ಉಮೇಶ್ 3-16 ವಿಕೇಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.

ಸಂಕ್ಷಿಪ್ತ ಸ್ಕೋರ್

ಭಾರತ 50 ಓವರ್‌ಗಳಲ್ಲಿ 324/7 (ಕಾರ್ತಿಕ್ 94, ಪಾಂಡ್ಯ 80, ಧವನ್ 60, ರುಬೆಲ್ 3-50),

ಬಾಂಗ್ಲಾದೇಶ 23.5 ಓವರ್‌ಗಳಲ್ಲಿ 84/10 (ಮೆಹದಿ 24, ಸುನ್ಜಮುಲ್ 18, ರಹೀಮ್ 13, ಭುವನೇಶ್ವರ್ 3-13, ಉಮೇಶ್ 3-16)

Follow Us:
Download App:
  • android
  • ios