ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯದಲ್ಲಿ ಹಲವು ದಾಖಲೆಗಳ ನಿರ್ಮಾಣವಾಗಿದೆ. ಗೆಲುವಿನ ಅಂತರದಲ್ಲಿ ಭಾರತ ಹೊಸ ರೆಕಾರ್ಡ್ ಮಾಡಿದೆ. ಆದೇನು? ಇಲ್ಲಿದೆ ವಿವರ

ಬೆಂಗಳೂರು(ಜೂ.15): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟೀಮ್ಇಂಡಿಯಾ ದಾಖಲೆಗಳ ಸುರಿಮಳೆ ಸುರಿಸಿದೆ. ಇತ್ತ ಅಫ್ಘಾನಿಸ್ತಾನ ಕೂಡ ಕೆಲವು ದಾಖಲೆ ಬರೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತಕ್ಕೆ ಗರಿಷ್ಠ ಗೆಲುವಿನ ದಾಖಲೆ

ಗೆಲುವು ಎದುರಾಳಿ ವರ್ಷ
ಇನ್ನಿಂಗ್ಸ್ ಹಾಗೂ 262ರನ್ಅಫ್ಘಾನಿಸ್ತಾನ 2018
ಇನ್ನಿಂಗ್ಸ್ ಹಾಗೂ 239 ರನ್ಬಾಂಗ್ಲಾದೇಶ2007
ಇನ್ನಿಂಗ್ಸ್ ಹಾಗೂ 239 ರನ್ಶ್ರೀಲಂಕಾ2017
ಇನ್ನಿಂಗ್ಸ್ ಹಾಗೂ 219ರನ್ ಆಸ್ಟ್ರೇಲಿಯಾ1998

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 474 ರನ್ ಸಿಡಿಸಿ ಆಲೌಟ್ ಆಗಿತ್ತು. ಆದರೆ ಅಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 109 ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ 103 ರನ್‌ಗಳಿಗೆ ಆಲೌಟ್ ಆಗೋ ಮೂಲಕ ಸೋಲಿಗೆ ಶರಣಾಯಿತು. ಈ ಮೂಲಕ ಭಾರತ ಇನ್ನಿಂಗ್ಸ್ ಹಾಗೂ 262 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ದಾಖಲೆ ಬರೆಯಿತು.