2ನೇ ಏಕದಿನ ಪಂದ್ಯದಲ್ಲಿ ಮಿಂಚಿನ ಬೌಲಿಂಕ್ ಮಾಡಿ 4 ವಿಕೇಟ್ ಕಬಳಿಸಿದ್ದ ಬುಮ್ರಾ ಈ ಪಂದ್ಯದಲ್ಲಿಯೂ ಕೇವಲ 27 ರನ್'ಗಳಿಗೆ 5 ವಿಕೇಟ್ ಕಿತ್ತು ಶ್ರೀಲಂಕಾ ಬ್ಯಾಟ್ಸ್'ಮೆನ್'ಗಳ ನೀರಿಳಿಸಿದರು.

ಪಲ್ಲೇಕೆಲಿ(ಆ.27): ಶ್ರೀಲಂಕಾ ತಂಡವೂ 3ನೇ ಪಂದ್ಯದಲ್ಲೂ ಭಾರತಕ್ಕೆ ಸುಲಭ ತುತ್ತಾಯಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡರೂ ಉತ್ತಮ ಮೊತ್ತ ದಾಖಲಿಸದೆ ಜಸ್'ಪ್ರೀತ್ ಬುಮ್ರಾ 27/5 ದಾಳಿಗೆ 218/9 ರನ್ ಪೇರಿಸಿತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ರೋಹಿತ್ ಶರ್ಮಾ ಅವರ ಆಕರ್ಷಕ ಶತಕ(124) ಹಾಗೂ ಬ್ಯಾಟಿಂಗ್ ಆಧಾರ ಸ್ತಂಭ ಮಹೇಂದ್ರ ಸಿಂಗ್ ಧೋನಿ ಅವರ ಅರ್ಧ ಶತಕದ ನೆರವಿನೊಂದಿಗೆ 45.1 ಓವರ್'ಗಳಲ್ಲಿಯೇ 218/4 ಸಾಧಾರಣ ಮೊತ್ತವನ್ನು ಬೆನ್ನಟ್ಟಿ 6 ವಿಕೇಟ್'ಗಳ ಜಯ ಸಾಧಿಸಿ ಸರಣಿಯನ್ನು 3-0 ತನ್ನ ಕೈವಶ ಮಾಡಿಕೊಂಡಿತು.

ಪಲ್ಲೇಕೆಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ನಾಯಕ ಕಾಪುಗೇದೆರ ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಆಟಗಾರ ಚಂಡಿಮಾಲ್(36), ತಿರಿಮನ್ನೆ(80) ಹಾಗೂ ಸಿರಿವರ್ಧನಾ(29) ಹೊರತುಪಡಿಸಿದರೆ ಮತ್ಯಾವ ದಾಂಡಿಗರು ಪ್ರತಿರೋಧ ತೋರಲಿಲ್ಲ.

2ನೇ ಏಕದಿನ ಪಂದ್ಯದಲ್ಲಿ ಮಿಂಚಿನ ಬೌಲಿಂಗ್ ಮಾಡಿ 4 ವಿಕೇಟ್ ಕಬಳಿಸಿದ್ದ ಬುಮ್ರಾ ಈ ಪಂದ್ಯದಲ್ಲಿಯೂ ಕೇವಲ 27 ರನ್'ಗಳಿಗೆ 5 ವಿಕೇಟ್ ಕಿತ್ತು ಶ್ರೀಲಂಕಾ ಬ್ಯಾಟ್ಸ್'ಮೆನ್'ಗಳ ನೀರಿಳಿಸಿದರು.

ಕಡಿಮೆ ಮೊತ್ತ 217 ರನ್ ಬೆನ್ನಟ್ಟಿದ ಟೀಂ ಇಂಡಿಯಾ 15 ಓವರ್'ಗಳಲ್ಲಿ 61 ರನ್ ಆಗುವಷ್ಟರಲ್ಲೇ ಧವನ್, ಕೊಹ್ಲಿ, ರಾಹುಲ್ ಹಾಗೂ ಜಾಧವ್ ಅವರ ವಿಕೇಟ್ ಕಳೆದು'ಕೊಂಡಿತು. 2ನೇ ಪಂದ್ಯದಲ್ಲಿ 6 ವಿಕೇಟ್ ಕಿತ್ತು ಅತ್ಯುತ್ತಮ ಬೌಲರ್ ಎನಿಸಿದ್ದ ಧನಂಜಯ 2 ಬಾಲ್'ಗಳಲ್ಲಿ 2 ವಿಕೇಟ್ ಕಿತ್ತು ಭಾರತೀಯ ಬ್ಯಾಟ್ಸ್'ಮೆನ್'ಗಳಲ್ಲಿ ಒಂದು ಕ್ಷಣ ಭಯವುಂಟು ಮಾಡಿದ್ದರು. ಆದರೆ ಆರಂಭಿಕ ಆಟಗಾರ ರೋಹಿತ್ ಶರ್ಮಾ (124: 145 ಎಸೆತ, 16 ಬೌಂಡರಿ ಹಾಗೀ 2 ಸಿಕ್ಸ್'ರ್) ಹಾಗೂ 2ನೇ ಪಂದ್ಯದಲ್ಲಿ ಸೋಲುವ ಪಂದ್ಯ ಗೆಲ್ಲಿಸಿದ್ದ ಕೂಲ್ ಕ್ಯಾಪ್ಟ'ನ್ ಮಹೇಂದ್ರ ಸಿಂಗ್ ಧೋನಿ ಅವರ ಸಮಯೋಚಿತ 67 (86 ಎಸೆತ: 4 ಬೌಂಡರಿ 1 ಸಿಕ್ಸ್'ರ್) ಆಟದ ನೆರವಿನಿಂದ 45.1 ಓವರ್'ಗಳಲ್ಲಿಯೇ ಟೀಂ ಇಂಡಿಯಾ ಗುರಿ ಮುಟ್ಟಿದರು.

ಮಳೆ ಹಾಗೂ ಪ್ರೇಕ್ಷಕರ ದಾಂಧಲೆ

ಶ್ರೀಲಂಕಾ ತಂಡ 47 ಓವರ್'ಗಳಲ್ಲಿ 192 ರನ್ ಗಳಿಸಿದ್ದಾಗ ಕೆಲ ನಿಮಿಷ ಮಳೆ ಬಂದು ಪಂದ್ಯ ಸ್ಥಗಿತಗೊಂಡಿತ್ತು. ಭಾರತ ತಂಡದವರು 43 ಓವರ್'ಗಳಲ್ಲಿ 210 ರನ್'ಗಳಿಸಿದ್ದಾಗ ಲಂಕಾ ತಂಡ ಸೋಲುವ ಕಾರಣದಿಂದ ಪ್ರೇಕ್ಷಕರು ಬಾಟಲ್'ಗಳನ್ನು ಎಸೆದು ದಾಂಧಲೆ ಉಂಟು ಮಾಡಿದ್ದರು. ಆಗ ಕೆಲ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಆಗ ಭದ್ರತಾ ಪಡೆ ದಾಂಧಲೆಯಲ್ಲಿ ತೊಡಗಿದ್ದ ಪ್ರೇಕ್ಷಕರನ್ನು ತೆರವುಗೊಳಿಸಿದ ನಂತರ ಪಂದ್ಯವನ್ನು ಮತ್ತೆ ಆರಂಭಿಸಲಾಯಿತು.

ಸ್ಕೋರ್

ಶ್ರೀಲಂಕಾ: 217/9(50)

ತಿರಮನೆ(80), ಬುಮ್ರಾ 27/5

ಭಾರತ: 218/4(45.1)

ರೋಹಿತ್ ಶರ್ಮಾ 124, ಎಂ.ಎಸ್.ಧೋನಿ 67, ಧನಂಜಯ 38/2

5 ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ 3-0 ಜಯ

ಪಂದ್ಯ ಪುರುಶೋತ್ತಮ: ಜಸ್'ಪ್ರೀತ್ ಬುಮ್ರಾ