ಶ್ರೀಲಂಕಾ ವಿರುದ್ಧದ 5ನೇ ಪಂದ್ಯ ಗೆಲ್ಲುವುದರೊಂದಿಗೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ
ಕೊಲೊಂಬೊ(ಆ.03): ಸರಣಿಯ ಕೊನೆಯ ಪಂದ್ಯದಲ್ಲೂ ಶ್ರೀಲಂಕಾ ತಂಡದವರು ಭಾರತಕ್ಕೆ ಹೆಚ್ಚು ಪ್ರತಿರೋಧ ತೋರಲಿಲ್ಲ. 238/10 ಒಡ್ಡಿದ ಸವಾಲನ್ನು ಟೀಂ ಇಂಡಿಯಾ 46.3 ಓವರ್'ಗಳಲ್ಲಿ 239/4 ಗುರಿ ಮುಟ್ಟಿ 6 ವಿಕೇಟ್'ಗಳ ಜಯ ದಾಖಲಿಸಿತು.
4ನೇ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ್ದ ನಾಯಕ ವಿರಾಟ್ ಕೊಹ್ಲಿ ಕೊನೆಯ ಪಂದ್ಯದಲ್ಲೂ ಶತಕ (110) ಬಾರಿಸುವುದರೊಂದಿಗೆ ಅಜೇಯರಾಗಿ ಉಳಿದರು. 115 ಎಸೆತಗಳಲ್ಲಿ 9 ಆಕರ್ಷಕ ಬೌಂಡರಿಗಳಿದ್ದವು. ಕೊಹ್ಲಿ ಗೆಲುವಿನ ನಡೆಗೆ ಕರ್ನಾಟಕದ ಮನೀಶ್ ಪಾಂಡೆ(36: 53 ಎಸೆತ, 2 ಬೌಂಡರಿ) ಹಾಗೂ ಕೇದಾರ್ ಜಾಧವ್ (63: 73 ಎಸೆತ, 7 ಬೌಂಡರಿ) ಜೊತೆಯಾದರು.
ಕೊಲೊಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್'ಗೆದ್ದು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡ 6 ಓವರ್'ಗಳಲ್ಲಿ 2 ವಿಕೇಟ್ ಕಳೆದುಕೊಂಡಿತು. ನಾಯಕ ಉಪಲ್ ತರಂಗ ವೇಗವಾಗಿ ಬ್ಯಾಟ್ ಬೀಸಿ 34 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 48 ರನ್ ಸ್ಫೋಟಿಸಿದರು. ಬುರ್ಮಾ ಬೌಲಿಂಗ್'ನಲ್ಲಿ ಔಟಾದ ನಂತರ ತಿರಮನೆ(67:102 ಎಸೆತ,3 ಬೌಂಡರಿ,1 ಸಿಕ್ಸ್'ರ್) ಹಾಗೂ ಮ್ಯಾಥ್ಯೂಸ್(55: 98 ಎಸೆತ, 4 ಬೌಂಡರಿ) ಅರ್ಧ ಶತಕಗಳ ಮೂಲಕ 4 ವಿಕೇಟ್ ಜೊತೆಯಾಟಕ್ಕೆ 122 ರನ್ ಪೇರಿಸಿದರು. ಇವರಿಬ್ಬರು ಔಟಾದ ನಂತರ ಮತ್ಯಾವ ದಾಂಡಿಗರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಂತಿಮವಾಗಿ ಶ್ರೀಲಂಕಾ ತಂಡ 49.4 ಓವರ್'ಗಳಲ್ಲಿ 238 ರನ್'ಗಳಿಗೆ ಸರ್ವ ಪತನ ಕಂಡಿತು.
ಕೀಪಿಂಗ್'ನಲ್ಲಿ ದಾಖಲೆ ಬರೆದ ಮಹೇಂದ್ರ ಸಿಂಗ್ ಧೋನಿ
ಮುನ್ನೂರು ಏಕದಿನ ಪಂದ್ಯಗಳ ಗಡಿ ದಾಟಿದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸರಣಿಯ ಕೊನೆಯ ಪಂದ್ಯದಲ್ಲಿ ಹೊಸ ವಿಶ್ವದಾಖಲೆ ಸ್ಥಾಪಿಸಿದರು. ಏಕದಿನ ಕ್ರಿಕೆಟ್'ನಲ್ಲಿ ಅತೀ ಹೆಚ್ಚು ಸ್ಟಂಪಿಂಗ್ ಮಾಡಿದ ದಾಖಲೆ ಸ್ಥಾಪಿಸಿದ್ದಾರೆ. ತಮ್ಮ 301ನೇ ಪಂದ್ಯದಲ್ಲಿ ಧೋನಿ 100 ಸ್ಟಂಪಿಂಗ್'ನ ಮೈಲಿಗಲ್ಲನ್ನೂ ಮುಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಧೋನಿಯ ದಾಖಲೆ ಬಂದಿದೆ. ಯುಜವೇಂದ್ರ ಚಾಹಲ್ ಬೌಲಿಂಗ್'ನಲ್ಲಿ ಧನಂಜಯ ಅವರನ್ನು ಧೋನಿ ಬಹಳ ಕೂಲ್ ಆಗಿ ಸ್ಟಂಪ್ ಔಟ್ ಮಾಡಿದರು.

ಮಿಂಚಿದ ಭುವನೇಶ್ವರ್
3ನೇ ಪಂದ್ಯದಲ್ಲಿ ಸೋಲುವ ಪಂದ್ಯವನ್ನು ಅಜೇಯ ಅರ್ಧ ಶತಕದ ಮೂಲಕ ಪಂದ್ಯ ಗೆಲ್ಲಿಸಿಕೊಟ್ಟಿದ್ದ ವೇಗಿ ಭುವನೇಶ್ವರ್ ಕುಮಾರ್. ಕೊನೆಯ ಪಂದ್ಯದಲ್ಲಿ 42/5 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಬುಮ್ರಾ 45/2, ಚಲಾಲ್ 36/1 ಹಾಗೂ ಕುಲ್ದೀಪದ ಯಾದವ್ 40/1 ವಿಕೇಟ್ ಪಡೆದರು. 5 ವಿಕೇಟ್ ಪಡೆದ ಭುವಿ ಪಂದ್ಯ ಪುರುಶೋತ್ತಮ ಪ್ರಶಸ್ತಿಗೆ ಪಾತ್ರರಾದರು. ಸರಣಿಯಲ್ಲಿ ಅತೀ ಹೆಚ್ಚು ವಿಕೇಟ್ ಪಡೆದ ಜಸ್'ಪ್ರೀತ್ ಬುಮ್ರಾ ಸರಣಿ ಪುರುಶೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸ್ಕೋರ್
ಶ್ರೀಲಂಕಾ: 238/10 (59.4)
ತಿರಮನೆ:67, ಮ್ಯಾಥೋಸ್:55, ತರಂಗ: 48
ಭುವನೇಶ್ವರ್ ಕುಮಾರ್: 42/5
ಭಾರತ: 239/4(46.3)
ವಿರಾಟ್ ಕೊಹ್ಲಿ: ಅಜೇಯ 110, ಕೇದಾರ್ ಜಾದವ್: 63, ಮನೀಶ್ ಪಾಂಡೆ: 36
ಪಂದ್ಯ ಪುರುಶೋತ್ತಮ: ಭುವನೇಶ್ವರ್ ಕುಮಾರ್
ಸರಣಿ ಪುರುಶೋತ್ತಮ: ಜಸ್;ಪ್ರೀತ್ ಬುಮ್ರಾ
ಭಾರತಕ್ಕೆ 5-0 ಸರಣಿ ಜಯ
