Asianet Suvarna News Asianet Suvarna News

ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಪಾಕ್ ವಿರುದ್ಧ ಭಾರತಕ್ಕೆ ರೋಚಕ ಜಯ

ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಡ್ರಾ ಸಾಧಿಸಿರುವ ಭಾರತ 7 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದ ಸೆಮಿಫೈನಲ್ ಪ್ರವೇಶದ ಸಾಧ್ಯತೆ ಇನ್ನಷ್ಟು ಗಟ್ಟಿಯಾಗಿದೆ.

india beat pakistan in asian champions trophy hockey

ಮಲೇಷ್ಯಾ(ಅ. 23): ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ಪಡೆದಿದೆ. ಇಂದು ನಡೆದ ಲೀಗ್ ಹಂತದ ತನ್ನ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 3-2 ಗೋಲುಗಳ ಅಂತರದಿಂದ ಜಯ ಸಾಧಿಸಿದೆ. ಮೊದಲಿಂದಲೂ ತೀವ್ರ ಹಣಾಹಣಿ ಕಂಡ ಈ ಪಂದ್ಯದಲ್ಲಿ ಭಾರತ 1-2 ಹಿನ್ನಡೆಯಿಂದ ಕಂಬ್ಯಾಕ್ ಮಾಡಿ ಗೆಲುವು ಸಾಧಿಸಿದ್ದು ಗಮನಾರ್ಹ. ಮೊದಲಾರ್ಧದಲ್ಲಿ ಭಾರತವೇ ಏಕೈಕ ಗೋಲಿನ ಮುನ್ನಡೆ ಪಡೆದಿತ್ತು. ದ್ವಿತೀಯಾರ್ಧ ಆರಂಭಗೊಂಡ ಕೆಲ ಕ್ಷಣಗಳಲ್ಲಿ ಪಾಕ್ ಎರಡು ಗೋಲು ಗಳಿಸಿ ಮುನ್ನಡೆ ಪಡೆಯಿತು. ಆನಂತರ, ಭಾರತ ಕೂಡ ಸತತ 2 ಗೋಲು ಗಳಿಸಿ 3-2 ಅಂತರದ ಜಯ ಸಾಧಿಸಿತು.

ಮಲೇಷ್ಯಾದ ಕ್ವಾಂಟಾನ್'ನಲ್ಲಿ ನಡೆಯುತ್ತಿರುವ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತಕ್ಕಿದು ಎರಡನೇ ಗೆಲುವಾಗಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಮತ್ತು ಒಂದು ಡ್ರಾ ಸಾಧಿಸಿರುವ ಭಾರತ 7 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದ ಸೆಮಿಫೈನಲ್ ಪ್ರವೇಶದ ಸಾಧ್ಯತೆ ಇನ್ನಷ್ಟು ಗಟ್ಟಿಯಾಗಿದೆ. ಟೀಮ್ ಇಂಡಿಯಾಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇದ್ದು ಅ. 25 ಮತ್ತು 26ರಂದು ಚೀನಾ ಹಾಗೂ ಆತಿಥೇಯ ಮಲೇಷ್ಯಾವನ್ನು ಎದುರುಗೊಳ್ಳಲಿದೆ.

ಏಷ್ಯಾದ ಟಾಪ್-6 ತಂಡಗಳು ಈ ಟೂರ್ನಿಯಲ್ಲಿ ಸ್ಪರ್ಧಿಸುತ್ತಿವೆ. ಭಾರತ, ಪಾಕಿಸ್ತಾನ, ದಕ್ಷಿಣ ಕೊರಿಯಾ ಮಲೇಷ್ಯಾ, ಚೀನಾ ಮತ್ತು ಜಪಾನ್ ತಂಡಗಳು ಪಾಲ್ಗೊಂಡಿವೆ.

Follow Us:
Download App:
  • android
  • ios