ಮೊದಲ ಪಂದ್ಯದಲ್ಲಿ ಸಿಂಗಾಪುರವನ್ನು ಅನಾಯಾಸವಾಗಿ ಮಣಿಸಿದ್ದ ರಾಣಿ ರಾಂಪಾಲ್ ಪಡೆ, ಎರಡನೇ ಪಂದ್ಯದಲ್ಲಿ ಚೀನಾವನ್ನು ಬಗ್ಗುಬಡಿದಿತ್ತು. ಇದೀಗ ಮಲೇಷ್ಯಾವನ್ನು ಮಣಿಸುವ ಮೂಲಕ ಕ್ವಾರ್ಟರ್'ಫೈನಲ್ ಪ್ರವೇಶಿಸಿದೆ.

ಕಕಮಿಗಹರ(ಅ.31): ಭಾರತ ಮಹಿಳಾ ಹಾಕಿ ತಂಡ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಜಯದ ನಾಗಾಲೋಟ ಮುಂದುವರೆದಿದೆ. ಮಲೇಷ್ಯಾ ವಿರುದ್ಧ ಭರ್ಜರಿ ಜಯಭೇರಿ ಬಾರಿಸುವ ಮೂಲಕ 'ಎ' ಗುಂಪಿನಲ್ಲಿ ರಾಣಿ ರಾಂಪಾಲ್ ಪಡೆ ಅಜೇಯವಾಗಿ ಕ್ವಾರ್ಟರ್'ಫೈನಲ್ ಪ್ರವೇಶಿಸಿದ್ದಾರೆ.

ಇಲ್ಲಿ ನಡೆಯುತ್ತಿರುವ 9ನೇ ಮಹಿಳಾ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ 2-0 ಗೋಲುಗಳಿಂದ ಮಲೇಷ್ಯಾ ಎದುರು ಜಯ ಸಾಧಿಸಿತು. ಭಾರತದ ಪರ ವಂದನಾ ಕಟಾರಿಯಾ (54ನೇ ನಿ.), ಗುರ್ಜಿತ್ ಕೌರ್ (55ನೇ ನಿ.)ದಲ್ಲಿ ಗೋಲುಗಳಿಸಿದರು. ಆದರೆ ಮಲೇಷ್ಯಾ ಪರ ಯಾವೊಬ್ಬ ಆಟಗಾರ್ತಿಯರು ಗೋಲುಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.

ಭಾರತ ‘ಎ’ ಗುಂಪಿನಲ್ಲಿ ಆಡಿರುವ ಎಲ್ಲಾ 3 ಪಂದ್ಯಗಳನ್ನು ಜಯಿಸುವ ಮೂಲಕ 9 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದೆ.

ಮೊದಲ ಪಂದ್ಯದಲ್ಲಿ ಸಿಂಗಾಪುರವನ್ನು ಅನಾಯಾಸವಾಗಿ ಮಣಿಸಿದ್ದ ರಾಣಿ ರಾಂಪಾಲ್ ಪಡೆ, ಎರಡನೇ ಪಂದ್ಯದಲ್ಲಿ ಚೀನಾವನ್ನು ಬಗ್ಗುಬಡಿದಿತ್ತು. ಇದೀಗ ಮಲೇಷ್ಯಾವನ್ನು ಮಣಿಸುವ ಮೂಲಕ ಕ್ವಾರ್ಟರ್'ಫೈನಲ್ ಪ್ರವೇಶಿಸಿದೆ.