ಮ್ಯಾನ್ಮಾರ್‌(ಆ.10): ಏಷ್ಯನ್‌ ಅಂಡರ್‌-23 ಪುರುಷರ ವಾಲಿಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಭಾರತ ತಂಡ ಇತಿಹಾಸ ಬರೆದಿದೆ. 

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ 3-1 ಸೆಟ್‌ಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತ, ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಉಪಾಂತ್ಯ ತಲುಪಿತು. ಶನಿವಾರ ನಡೆಯಲಿರುವ ಸೆಮೀಸ್‌ನಲ್ಲಿ ಭಾರತ, ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ. 

ಆಸೀಸ್‌ ವಿರುದ್ಧ ಮೊದಲ ಸೆಟ್‌ ಅನ್ನು 16-25ರಿಂದ ಸೋತಿದ್ದ ಭಾರತ, ನಂತರದ 3 ಸೆಟ್‌ಗಳಲ್ಲಿ 25-19, 25-21, 27-25ರಲ್ಲಿ ಗೆದ್ದು ಪಂದ್ಯ ತನ್ನದಾಗಿಸಿಕೊಂಡಿತು. ಪಾಕಿಸ್ತಾನ ಕಜಕಸ್ತಾನವನ್ನು ಸೋಲಿಸಿ ಸೆಮೀಸ್‌ಗೇರಿತು. ಚೈನೀಸ್‌ ತೈಪೆ ಹಾಗೂ ಜಪಾನ್‌ ಮತ್ತೊಂದು ಸೆಮೀಸ್‌ನಲ್ಲಿ ಸೆಣಸಲಿವೆ.