ಕೋಲ್ಕತ್ತಾ(ಸೆ.02): ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಮುನ್ನಡೆ ಪಡೆಯುವತ್ತ ಹೆಜ್ಜೆ ಇಟ್ಟಿದೆ.
ಭಾರತ ಮೊದಲ ಇನ್ನಿಂಗ್ಸ್ನಲ್ಲಿ 316 ರನ್ ಗಳಿಸಿತ್ತು. ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 2ನೇ ದಿನದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿದೆ. ಕಿವೀಸ್ ಇನ್ನೂ 188 ರನ್ ಹಿನ್ನಡೆಯಲ್ಲಿದೆ.
ಭಾರತದ ಪರ ಭುವನೇಶ್ವರ್ ಕುಮಾರ್ 5 ವಿಕೆಟ್ ಕಬಳಿಸಿ, ಕಿವೀಸ್ ರನ್ ಓಟಕ್ಕೆ ಬ್ರೇಕ್ ಹಾಕಿದ್ರು. ಕಿವೀಸ್ನ ಯಾರೋಬ್ಬರೂ ಅರ್ಧಶತಕ ದಾಖಲಿಸಲು ಭಾರತೀಯ ಬೌಲರ್ಸ್ ಬಿಡಲಿಲ್ಲ.
ಇಂದು ಮೂರನೇ ದಿನದಾಟ ಆರಂಭವಾಗಿದ್ದು, ಸದ್ಯದ ವರದಿ ಬಂದಾಗ ಕಿವೀಸ್ 157ಕ್ಕೆ 7 ಕೆಳೆದುಕೊಂಡಿದೆ.
