ಇಲ್ಲಿನ ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಇಂದು ಅಭ್ಯಾಸ ಪಂದ್ಯ ನಡೆಯಲಿದೆ.

ಲಂಡನ್(ಮೇ.28): ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಹಾಲಿ ಚಾಂಪಿಯನ್ ಭಾರತ ತಂಡ, ಇಂದು ನಡೆಯಲಿರುವ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್‌ ಎದುರು ಸೆಣಸಲಿದೆ.

ಚುಟುಕು ಮಾದರಿಯ ಐಪಿಎಲ್ ಮುಗಿಸಿ ಗುರುವಾರವಷ್ಟೇ ಲಂಡನ್‌'ಗೆ ಬಂದಿಳಿದ ಭಾರತ ತಂಡ ಶುಕ್ರವಾರ ಹಾಗೂ ಶನಿವಾರ ನೆಟ್ಸ್‌'ನಲ್ಲಿ ಅಭ್ಯಾಸ ನಡೆಸಿದೆ.

ಇಲ್ಲಿನ ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲಿ ಇಂದು ಅಭ್ಯಾಸ ಪಂದ್ಯ ನಡೆಯಲಿದೆ. ಆರು ವಾರಗಳ ಕಾಲ ಐಪಿಎಲ್‌'ನಲ್ಲಿ ಪಾಲ್ಗೊಂಡಿದ್ದ ಭಾರತೀಯ ಆಟಗಾರರು 4 ತಿಂಗಳ ಬಳಿಕ ಏಕದಿನ ಮಾದರಿ ಆಡುತ್ತಿದ್ದಾರೆ.

ನಾಯಕ ವಿರಾಟ್‌ ಕೊಹ್ಲಿ ಇಂಗ್ಲೆಂಡ್‌ ನೆಲದಲ್ಲಿ ಈ ಹಿಂದಿನ ಪ್ರವಾಸಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಈ ಬಾರಿ ಅವರ ಮೇಲೆ ಸಾಕಷ್ಟು ಒತ್ತಡವಿದೆ. ಇನ್ನು ನ್ಯೂಜಿಲೆಂಡ್‌ ತಂಡ ಕೂಡ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಪ್ರಭಾವಿ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. 
ಭಾರತ:

ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮಾ, ಎಂ.ಎಸ್‌. ಧೋನಿ, ಕೇದಾರ್‌ ಜಾಧವ್‌, ಅಜಿಂಕ್ಯ ರಹಾನೆ, ಹಾರ್ದಿಕ್‌ ಪಾಂಡ್ಯ, ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜಾ, ಉಮೇಶ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ದಿನೇಶ್‌ ಕಾರ್ತಿಕ್‌, ಜಸ್ಟ್ರೀತ್‌ ಬುಮ್ರಾ
ನ್ಯೂಜಿಲೆಂಡ್‌:

ಕೇನ್‌ ವಿಲಿಯಮ್ಸನ್‌ (ನಾಯಕ), ಟಾಮ್‌ ಲೇಥಮ್‌, ಮಾರ್ಟಿನ್‌ ಗಪ್ಟಿಲ್‌, ರಾಸ್‌ ಟೇಲರ್‌, ಲ್ಯೂಕ್‌ ರೊಂಚಿ, ನೀಲ್‌ ಬ್ರೂಮ್‌, ಜಿಮ್ಮಿ ನಿಶಾಮ್‌, ಕಾಲಿನ್‌ ಡಿ ಗ್ರಾಂಡ್‌ಹೋಮ್‌, ಕೋರಿ ಆ್ಯಂಡರ್ಸನ್‌, ಮಿಚೆಲ್‌ ಸ್ಯಾಂಟ್ನರ್‌, ಜೀತನ್‌ ಪಟೇಲ್‌, ಆ್ಯಡಮ್‌ ಮಿಲ್ನೆ, ಮಿಚೆಲ್‌ ಮೆಕ್ಲನಾಘನ್‌, ಟಿಮ್‌ ಸೌಥಿ, ಟ್ರೆಂಟ್‌ ಬೋಲ್ಟ್‌