ಜೆಸ್ಸಿಕಾ ಸ್ಮಿತ್ 18 ಹಾಗೂ 53ನೇ ನಿಮಿಷದಲ್ಲಿ ಬಾರಿಸಿದ 2 ಗೋಲುಗಳ ನೆರವಿನಿಂದ ಆಸ್ಟ್ರೇಲಿಯಾ ಜಯಭೇರಿ ಬಾರಿಸಿತು.

ಪರ್ತ್(ಅ.7): ಆಸ್ಟ್ರೇಲಿಯಾ ಲೀಗ್ ಹಾಕಿ ಪಂದ್ಯಾವಳಿಯ ಅಭಿಯಾನವನ್ನು ಭಾರತ ‘ಎ’ ಮಹಿಳೆಯರ ತಂಡ ಸೋಲಿನೊಂದಿಗೆ ಮುಕ್ತಾಯಗೊಳಿಸಿದೆ.

ಇಂದು ನಡೆದ ಪಂದ್ಯದಲ್ಲಿ ಭಾರತ ‘ಎ’ ತಂಡ ಆಸ್ಟ್ರೇಲಿಯಾದ ಕ್ಯಾಪಿಟಲ್ ಟೆರಿಟರಿ ವಿರುದ್ಧ 0-2 ಗೋಲುಗಳಿಂದ ಸೋಲನುಭವಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಭಾರತ ವನಿತೆಯರ ತಂಡ 9ನೇ ಸ್ಥಾನ ಪಡೆಯಿತು.

ಜೆಸ್ಸಿಕಾ ಸ್ಮಿತ್ 18 ಹಾಗೂ 53ನೇ ನಿಮಿಷದಲ್ಲಿ ಬಾರಿಸಿದ 2 ಗೋಲುಗಳ ನೆರವಿನಿಂದ ಆಸ್ಟ್ರೇಲಿಯಾ ಜಯಭೇರಿ ಬಾರಿಸಿತು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಭಾರತದ ಆಟಗಾರ್ತಿಯರು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು. ಆಸೀಸ್ ಇದರ ಸಂಪೂರ್ಣ ಲಾಭ ಪಡೆದು, ಪಂದ್ಯವನ್ನು ತನ್ನದಾಗಿಸಿಕೊಂಡಿತು.