Asianet Suvarna News Asianet Suvarna News

ಇಂದು ಡಮ್ಮಿ ಮ್ಯಾಚ್ ಬಿಡಿ-ಹೈವೋಲ್ಟೇಜ್ ಮ್ಯಾಚ್ ನೋಡಿ

ವಿಂಡೀಸ್ ಟಿ20 ಪಂದ್ಯದಲ್ಲಾದರೂ ರೋಹಿತ್ ಪಡೆಗೆ ಕಠಿಣ ಪೈಪೋಟಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು, ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಆದರೆ ಮಹಿಳಾ ಟಿ20 ವಿಶ್ವಕಪ್’ನಲ್ಲಿ ಭರ್ಜರಿ ಶುಭಾರಂಭ ಮಾಡಿರುವ ವನಿತೆಯರ ಟೀಂ ಇಂಡಿಯಾ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಕಾದಾಡುವ ಮೂಲಕ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡುವ ಆಸೆ ಹೆಚ್ಚಿಸಿದೆ. 

ಬೆಂಗಳೂರು[ನ.11]: ಇಂದು ಭಾರತ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಸೂಪರ್ ಸಂಡೆ ಆಗಿರಲಿದೆ. ಒಂದು ಕಡೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 3 ಪಂದ್ಯಗಳ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್’ಸ್ವೀಪ್ ಮಾಡುವ ವಿಶ್ವಾಸದಲ್ಲಿದ್ದರೆ, ಮತ್ತೊಂದೆಡೆ ಹರ್ಮನ್’ಪ್ರೀತ್ ಕೌರ್ ನೇತೃತ್ವದ ವನಿತೆಯರ ಟೀಂ ಇಂಡಿಯಾ ವಿಶ್ವಕಪ್ ಟಿ20 ಟೂರ್ನಿಯಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿಯಲು ಸಜ್ಜಾಗಿದೆ. 