Asianet Suvarna News Asianet Suvarna News

ಮೂರು ದಾಖಲೆ ನಿರ್ಮಿಸಲು ಸಜ್ಜಾದ ಕೊಹ್ಲಿ: ದಿಗ್ಗಜರ ದಾಖಲೆ ಶೀಘ್ರದಲ್ಲೇ ಉಡೀಸ್..?

Oct 19, 2018, 2:59 PM IST

ಬೆಂಗಳೂರು[ಅ.19]: ಟೀಂ ಇಂಡಿಯಾ ವಿರಾಟ್ ಕೊಹ್ಲಿ ಪ್ರತಿ ಸರಣಿಯಲ್ಲೂ ಒಂದಿಲ್ಲೊಂದು ದಾಖಲೆಗಳನ್ನು ಬರೆಯುತ್ತಲೇ ಸಾಗುತ್ತಿದ್ದಾರೆ. ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲೂ ದಾಖಲೆ ಬರೆಯಲು ಟೀಂ ಇಂಡಿಯಾದ ರನ್ ಮಷೀನ್ ಸಜ್ಜಾಗಿದ್ದಾರೆ.

ಇದೇ ಭಾನುವಾರ[ಅ.21]ದಿಂದ ಆರಂಭವಾಗಲಿರುವ ಭಾರತ-ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಹಲವು ಅಪರೂಪದ ದಾಖಲೆಗಳಿಗೆ ಸಾಕ್ಷಿಯಾಗಲಿದ್ದು, ವಿರಾಟ್ ಕೊಹ್ಲಿ ಮೂರು ಅಪರೂಪದ ದಾಖಲೆ ನಿರ್ಮಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದರಲ್ಲಿ ಸಚಿನ್ ತೆಂಡುಲ್ಕರ್ ಅವರ ದಾಖಲೆಯೂ ಇತಿಹಾಸ ಸೇರಲಿದೆ. ಯಾವುದವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ...