ವಡೋದರಾದಲ್ಲಿ ವಿಂಡೀಸ್ ತಂಡಕ್ಕೆ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ ನೀಡಲಾಯಿತು. ಸೆ.29ರಿಂದ ಬಿಸಿಸಿಐ ಅಧ್ಯಕ್ಷರ ಇಲೆವೆನ್ ವಿರುದ್ಧ 2 ದಿನಗಳ ಅಭ್ಯಾಸ ಪಂದ್ಯವನ್ನಾಡಲಿರುವ ವಿಂಡೀಸ್, ಅ.4ರಿಂದ ರಾಜ್‌ಕೋಟ್‌ನಲ್ಲಿ ಭಾರತ ವಿರುದ್ಧ ಮೊದಲ ಟೆಸ್ಟ್ ಆಡಲಿದೆ.
ನವದೆಹಲಿ(ಸೆ.28): ಸುದೀರ್ಘ ಒಂದೂವರೆ ತಿಂಗಳುಗಳ ಕಾಲ ಕ್ರಿಕೆಟ್ ಆಡಲು ಗುರುವಾರ ವೆಸ್ಟ್‌ಇಂಡೀಸ್ ತಂಡ ಭಾರತಕ್ಕೆ ಬಂದಿಳಿಯಿತು.
ವಡೋದರಾದಲ್ಲಿ ವಿಂಡೀಸ್ ತಂಡಕ್ಕೆ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ ನೀಡಲಾಯಿತು. ಸೆ.29ರಿಂದ ಬಿಸಿಸಿಐ ಅಧ್ಯಕ್ಷರ ಇಲೆವೆನ್ ವಿರುದ್ಧ 2 ದಿನಗಳ ಅಭ್ಯಾಸ ಪಂದ್ಯವನ್ನಾಡಲಿರುವ ವಿಂಡೀಸ್, ಅ.4ರಿಂದ ರಾಜ್‌ಕೋಟ್‌ನಲ್ಲಿ ಭಾರತ ವಿರುದ್ಧ ಮೊದಲ ಟೆಸ್ಟ್ ಆಡಲಿದೆ. ಆ ಬಳಿಕ ಹೈದರಾಬಾದ್’ನಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನಾಡಲಿದೆ.
ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ ಬಳಿಕ 5 ಏಕದಿನ ಹಾಗೂ 3 ಟಿ20 ಪಂದ್ಯಗಳು ನಡೆಯಲಿವೆ. ನ.11ಕ್ಕೆ ವಿಂಡೀಸ್ ತಂಡದ ಭಾರತ ಪ್ರವಾಸ ಅಂತ್ಯಗೊಳ್ಳಲಿದೆ.
