Asianet Suvarna News Asianet Suvarna News

ಟೀಂ ಇಂಡಿಯಾ 292ಕ್ಕೆ ಆಲೌಟ್: 40 ರನ್’ಗಳ ಹಿನ್ನಡೆ

6 ವಿಕೆಟ್ ನಷ್ಟಕ್ಕೆ 174 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಭಾರತ ಅತ್ಯುತ್ತಮ ಹೋರಾಟ ನೀಡಿತು. ರವೀಂದ್ರ ಜಡೇಜಾ[86*] ಹಾಗೂ ಹನುಮಾ ವಿಹಾರಿ[56] ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು.

Ind Vs Eng Test India bowled out for 292 trail by 40
Author
Oval Road, First Published Sep 9, 2018, 7:33 PM IST

 

ಓವಲ್(ಸೆ.09): ಇಂಗ್ಲೆಂಡ್ ವಿರುದ್ದದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 292 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 40 ರನ್‌ಗಳ ಹಿನ್ನಡೆ ಅನುಭವಿಸಿದೆ.

6 ವಿಕೆಟ್ ನಷ್ಟಕ್ಕೆ 174 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಭಾರತ ಅತ್ಯುತ್ತಮ ಹೋರಾಟ ನೀಡಿತು. ರವೀಂದ್ರ ಜಡೇಜಾ[86*] ಹಾಗೂ ಹನುಮಾ ವಿಹಾರಿ[56] ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು.  ಚೊಚ್ಚಲ ಪಂದ್ಯವಾಡಿದ ಹನುಮಾ ವಿಹಾರಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ವಿಹಾರಿ 56 ರನ್ ಸಿಡಿಸಿ ಔಟಾದರು. ಆದರೆ ರವೀಂದ್ರ ಜಡೇಜಾ ತಂಡದ ಬ್ಯಾಟಿಂಗ್ ಜವಾಬ್ದಾರಿ ನಿರ್ವಹಿಸಿದರು.

ಅಂತಿಮ ಹಂತದಲ್ಲಿ ಟೀಂ ಇಂಡಿಯಾ ಬಾಲಂಗೋಚಿಗಳ ಜೊತೆ ಬ್ಯಾಟ್ ಬೀಸಿದ ಜಡೇಜಾ ಅರ್ಧ ಶತಕ ಬಾರಿಸಿದರು. ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಹಾಗೂ ಜಸ್‌ಪ್ರೀತ್ ಬುಮ್ರಾ ಅವರೊಂದಿಗೆ ಇನ್ನಿಂಗ್ಸ್ ಕಟ್ಟಿದ ಜಡೇಜಾ 86 ರನ್ ಬಾರಿಸಿ ಅಜೇಯರಾಗುಳಿದರು.

ಇಂಗ್ಲೆಂಡ್ ಪರ ಸ್ಟೋಕ್ಸ್, ಆ್ಯಂಡರ್’ಸನ್ ಹಾಗೂ ಮೊಯಿನ್ ಅಲಿ ತಲಾ 2 ವಿಕೆಟ್ ಪಡೆದರೆ, ರಶೀದ್, ಕುರಾನ್ ಮತ್ತು ಬ್ರಾಡ್ ತಲಾ ಒಂದೊಂದು ವಿಕೆಟ್ ಪಡೆದರು. 

ಸಂಕ್ಷಿಪ್ತ ಸ್ಕೋರ್: 
ಇಂಗ್ಲೆಂಡ್: 332/10

ಭಾರತ: 292/10
ಜಡೇಜಾ 86

[* ವಿವರ ಅಪೂರ್ಣ]

Follow Us:
Download App:
  • android
  • ios