ಲಾರ್ಡ್ಸ್[ಆ.10]: ಭಾರತಕ್ಕೆ ಆರಂಭದಲ್ಲೇ ಜೇಮ್ಸ್ ಆ್ಯಂಡರ್’ಸನ್ ಎರಡನೇ ಆಘಾತ ನೀಡಿದ್ದಾರೆ. ಕೆ.ಎಲ್ ರಾಹುಲ್ ಕೇವಲ 8 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಲಾರ್ಡ್ಸ್’ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್’ನ ಮೊದಲ ಇನ್ನಿಂಗ್ಸ್’ನ ಏಳನೇ ಓವರ್’ನ ಮೊದಲ ಎಸೆತದಲ್ಲಿ ಆ್ಯಂಡರ್’ಸನ್ ಬಲಗೈ ಬ್ಯಾಟ್ಸ್’ಮನ್’ಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಕೇವಲ 14 ಎಸೆತಗಳಲ್ಲಿ ಎರಡು ಬೌಂಡರಿಗಳೊಂದಿಗೆ ಎಂಟು ರನ್ ಬಾರಿಸಿದ್ದ ರಾಹುಲ್ ಬೈರಿಸ್ಟೋ’ಗೆ ಕ್ಯಾಚಿತ್ತು ಹೊರನಡೆದರು.

ಮೊದಲ ಓವರ್’ನಲ್ಲೇ ವಿಜಯ್ ಅವರನ್ನು ಬಲಿ ಪಡೆದಿದ್ದ ಆ್ಯಂಡರ್’ಸನ್ ಮತ್ತೊಮ್ಮೆ ರಾಹುಲ್ ವಿಕೆಟ್ ಕಬಳಿಸುವ ಮೂಲಕ ಕಂಠಕವಾಗಿ ಪರಿಣಮಿಸಿದ್ದಾರೆ. ಇದೀಗ ಭಾರತ 12 ರನ್’ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.