ಟೀಂ ಇಂಡಿಯಾಗೆ ಆರಂಭಿಕ ಆಘಾತ; ಶಾಕ್ ಕೊಟ್ಟ ಆ್ಯಂಡರ್’ಸನ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 3:51 PM IST
Ind Vs Eng Test Anderson removes Murali Vijay early
Highlights

ಈಗಾಗಲೇ ಮೊದಲ ದಿನ ಮಳೆಯಿಂದಾಗಿ ವ್ಯರ್ಥವಾಗಿತ್ತು. ಇದೀಗ ಎರಡನೇ ದಿನದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತ್ತು. ಮೊದಲ ಓವರ್ ದಾಳಿಗಿಳಿದ ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆ್ಯಂಡರ್’ಸನ್ ತಾವೆಸೆದ 5 ಎಸೆತದಲ್ಲಿ ಮುರುಳಿ ವಿಜಯ್ ವಿಕೆಟ್ ಎಗರಿಸುವಲ್ಲಿ ಯಶಸ್ವಿಯಾದರು.

ಲಾರ್ಡ್ಸ್[ಆ.10]: ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್’ನ ಎರಡನೇ ದಿನದ ಆರಂಭದಲ್ಲೇ ಟೀಂ ಇಂಡಿಯಾಗೆ ಆಘಾತ ಎದುರಾಗಿದ್ದು, ಜೇಮ್ಸ್ ಆ್ಯಂಡರ್’ಸನ್ ಬೌಲಿಂಗ್’ನಲ್ಲಿ ಆರಂಭಿಕ ಬ್ಯಾಟ್ಸ್’ಮನ್ ಮುರುಳಿ ವಿಜಯ್ ಶೂನ್ಯ ಪೆವಿಲಿಯನ್ ಸೇರಿದ್ದಾರೆ.

ಈಗಾಗಲೇ ಮೊದಲ ದಿನ ಮಳೆಯಿಂದಾಗಿ ವ್ಯರ್ಥವಾಗಿತ್ತು. ಇದೀಗ ಎರಡನೇ ದಿನದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತ್ತು. ಮೊದಲ ಓವರ್ ದಾಳಿಗಿಳಿದ ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆ್ಯಂಡರ್’ಸನ್ ತಾವೆಸೆದ 5 ಎಸೆತದಲ್ಲಿ ಮುರುಳಿ ವಿಜಯ್ ವಿಕೆಟ್ ಎಗರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಖಾತೆಯುವ ಮುನ್ನವೇ ವಿಜಯ್ ಪೆವಿಲಿಯನ್ ಹಾದಿ ಹಿಡಿದರು.

ಇದೀಗ ಕೆ.ಎಲ್ ರಾಹುಲ್ ಹಾಗೂ ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಮಾಡುತ್ತಿದ್ದಾರೆ.

loader