ನವದೆಹಲಿ[ಸೆ.02]: ಭಾರತದ ಟೆಸ್ಟ್ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಅವರ ಬ್ಯಾಟಿಂಗ್ ಸಾಮರ್ಥ್ಯ ಕುರಿತು ಟ್ವೀಟರ್‌ನಲ್ಲಿ ಗೇಲಿ ಮಾಡಿದ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೆಕರ್ ಇದೀಗ ಜಾಲತಾಣಗಳಲ್ಲಿ ಭಾರೀ ಟ್ರೋಲ್‌ಗೆ ಗುರಿಯಾಗಿದ್ದಾರೆ. 

ಸಂಜಯ್ ತಮ್ಮ ಟ್ವೀಟರ್ ಖಾತೆಯಲ್ಲಿ, ‘ಯಾರಾದರೂ ತಮಗೆ ಏನನ್ನಾದರೂ ಸಾಧಿಸಲು ಸಾಮರ್ಥ್ಯವಿಲ್ಲ ಎಂದು ಕೊಂಡರೆ, ನಿಮಗೆ ಚೇತೇಶ್ವರ ಪೂಜಾರರನ್ನು ಮಾದರಿಯಾಗಿಸಿಕೊಳ್ಳಿ’ ಎಂದು ಹಾಕಿದ್ದರು. 

‘ಸಂಜಯ್ ಏನಾದರೂ ಮಾತನಾಡಬೇಕಾದರೆ ನೂರು ಬಾರಿ ಯೋಚಿಸಿ, ನಿಮಗಿಂತ ನೂರರಷ್ಟು ಚೇತೇಶ್ವರ್ ಪೂಜಾರ ಉತ್ತಮ ಬ್ಯಾಟ್ಸ್‌ಮನ್’ ಎಂದಿದ್ದಾರೆ, ‘ನಿಮಗೆ ರೋಹಿತ್ ಮಾತ್ರ ಉತ್ತಮ ಬ್ಯಾಟ್ಸ್‌ಮನ್ ಪೂಜಾರ ಏಕೆ ಅಲ್ಲ’ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಪೂಜಾರ ನಾಲ್ಕನೇ ಟೆಸ್ಟ್’ನ ಮೊದಲ ಇನ್ನಿಂಗ್ಸ್’ನಲ್ಲಿ ಅಜೇಯ 132 ರನ್ ಸಿಡಿಸುವ ಮೂಲಕ ಭಾರತ ತಂಡಕ್ಕೆ ಅಲ್ಪ ಮುನ್ನಡೆ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು.