ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿರುವ ರಾಹುಲ್ ಬದಲು, ಪೃಥ್ವಿ ಶಾ ಸ್ಥಾನ ಪಡೆವ ಸಾಧ್ಯತೆಗಳಿವೆ.
ನವದೆಹಲಿ(ಸೆ.05): ವಿಶ್ವಕಪ್ ವಿಜೇತ ಭಾರತ ಕಿರಿಯರ ತಂಡದ ಮಾಜಿ ನಾಯಕ ಪೃಥ್ವಿ ಶಾ, ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸಂಪೂರ್ಣ ಕಳಪೆ ಪ್ರದರ್ಶನ ತೋರಿರುವ ಕೆ.ಎಲ್.ರಾಹುಲ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿರುವ ರಾಹುಲ್ ಬದಲು, ಪೃಥ್ವಿ ಶಾ ಸ್ಥಾನ ಪಡೆವ ಸಾಧ್ಯತೆಗಳಿವೆ. ಪೃಥ್ವಿ ಶಾ, ಇಂಗ್ಲೆಂಡ್ ಪ್ರವಾಸದ ತ್ರಿಕೋನ ಸರಣಿಯಲ್ಲಿ 151 ರನ್ ಗಳಿಸಿದ್ದರೆ, ಬಳಿಕ ನಡೆದ ಅನಧಿಕೃತ ಟೆಸ್ಟ್‌ನ 4 ಇನ್ನಿಂಗ್ಸ್‌ಗಳಲ್ಲಿ 250 ರನ್ ಗಳಿಸಿದ್ದರು.
ಇನ್ನು ಕಳಪೆ ಪ್ರದರ್ಶನದಿಂದ ಕಂಗೆಟ್ಟಿರುವ ರಾಹುಲ್ 4 ಟೆಸ್ಟ್’ಗಳ 8 ಇನ್ನಿಂಗ್ಸ್’ಗಳಲ್ಲಿ ಕೇವಲ 14.1ರ ಸರಾಸರಿಯಲ್ಲಿ 113 ರನ್’ಗಳನ್ನಷ್ಟೇ ಬಾರಿಸಿದ್ದಾರೆ.
