3ನೇ ಏಕದಿನ ಪಂದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಹೊಸ ಆಟಗಾರ

Ind Vs Eng James Vince Called Up for Final ODI
Highlights

ಭಾರತ ‘ಎ’ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ಪರ ಆಡಲಿರುವ ಡೇವಿಡ್ ಮಲನ್, ಸ್ಯಾಮ್ ಕುರ್ರಾನ್ ಏಕದಿನ ತಂಡದಿಂದ  ಹೊರಬಿದ್ದಿದ್ದಾರೆ. 

ಲಂಡನ್[ಜು.16]: ಇಲ್ಲಿನ ಲೀಡ್ಸ್ ಅಂಗಣದಲ್ಲಿ ಮಂಗಳವಾರ ನಡೆಯಲಿರುವ ಭಾರತ ವಿರುದ್ಧದ 3ನೇ ಮತ್ತು ನಿರ್ಣಾಯಕ ಏಕದಿನ ಪಂದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಬದಲಾವಣೆ ಮಾಡಲಾಗಿದೆ.
ಭಾರತ ‘ಎ’ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಲಯನ್ಸ್ ಪರ ಆಡಲಿರುವ ಡೇವಿಡ್ ಮಲನ್, ಸ್ಯಾಮ್ ಕುರ್ರಾನ್ ಏಕದಿನ ತಂಡದಿಂದ  ಹೊರಬಿದ್ದಿದ್ದಾರೆ. 

ಇವರ ಬದಲಿಗೆ ಜೇಮ್ಸ್ ವಿನ್ಸ್’ಗೆ ಸ್ಥಾನ ನೀಡಲಾಗಿದೆ. ಹ್ಯಾಂಪ್‌ಶೈರ್ ಆಟಗಾರ ವಿನ್ಸ್ ಇತ್ತೀಚೆಗೆ ದೇಸಿ ಏಕದಿನ ಟೂರ್ನಿಯಲ್ಲಿ ಸಾಮರ್‌ಸೆಟ್ ವಿರುದ್ಧ 109 ರನ್, ಯಾರ್ಕ್’ಶೈರ್ ವಿರುದ್ಧ 171 ರನ್ ಬಾರಿಸಿದ್ದರು. ಅದ್ಭುತ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ವಿನ್ಸ್ ಇಂಗ್ಲೆಂಡ್ ತಂಡದ ಪರ ಕಣಕ್ಕಿಳಿಯಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಭಾರತ ಗೆದ್ದಿದ್ದರೆ, ಇಂಗ್ಲೆಂಡ್ ಎರಡನೇ ಪಂದ್ಯವನ್ನು ಗೆದ್ದು ಸಮಬಲ ಸಾಧಿಸಿದೆ. ಇದೀಗ ನಾಳೆ[ಜು.17] ನಡೆಯಲಿರುವ ಅಂತಿಮ ಹಾಗೂ ನಿರ್ಣಾಯಕ ಪಂದ್ಯದ ವಿಜೇತ ತಂಡ ಸರಣಿ ಗೆಲ್ಲಲಿದೆ. ಈಗಾಗಲೇ ಭಾರತ ಟಿ20 ಸರಣಿಯನ್ನು 2-1 ಅಂತರದಲ್ಲಿ ಜಯಿಸಿದೆ. 

loader