ಸೊನ್ನೆ ಸುತ್ತಿದ ಕೊಹ್ಲಿ, ಪೂಜಾರ: ಸೋಲಿನ ಸುಳಿಯಲ್ಲಿ ಭಾರತ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Sep 2018, 3:02 AM IST
ind vs eng England 7 wickets away from win after Cooks farewell ton
Highlights

ಅಂತಿಮ ಟೆಸ್ಟ್ ನಲ್ಲಿ ಪ್ರವಾಸಿ ಭಾರತದ ವಿರುದ್ಧ ಇಂಗ್ಲೆಂಡ್ ಬಿಗಿ ಹಿಡಿತ ಸಾಧಿಸಿದೆ. ವಿದಾಯ ಪಂದ್ಯದಲ್ಲಿ ಅದ್ಭುತ ಶತಕ ದಾಖಲಿಸಿದ ಅಲಿಸ್ಟರ್ ಕುಕ್ ಬ್ಯಾಟಿಂಗ್ ನೆರವಿನಿಂದ 464 ರನ್ ಗಳ ಬೃಹತ್ ಮುನ್ನಡೆ ಪಡೆದುಕೊಂಡಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 58 ರನ್ ಗೆ 3 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದೆ.

ಓವೆಲ್(ಸೆ.11) ನಾಲ್ಕನೇ ದಿನದಾಟದ ಅಂತ್ಯಕ್ಕೆ ಕೆ.ಎಲ್ ರಾಹುಲ್ 46 ಮತ್ತು ಅಜಿಂಕ್ಯಾ ರೆಹಾನೆ 10 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಶಿಖರ್ ಧವನ್ 1 ರನ್ ಗಳಿಸಿ ನಿರ್ಗಮಿಸಿದರೆ ಚೇತೇಶ್ವರ ಪೂಜಾರ ಮತ್ತು ನಾಯಕ ವಿರಾಟ್‌ ಕೊಹ್ಲಿ ಸೊನ್ನೆ ಸುತ್ತಿದರು.

ಇಂಗ್ಲೆಂಡ್ ಪರ ಜೇಮ್ಸ್ ಆಂಡರ್‌ಸನ್ 2 ಮತ್ತು ಸ್ಟುವರ್ಟ್ ಬ್ರಾಡ್ 1 ವಿಕೆಟ್ ಪಡೆದುಕೊಂಡರು. ಇದಕ್ಕೂ ಮುನ್ನ ನಾಲ್ಕನೇ ದಿನದಾಟದಲ್ಲಿ ಕುಕ್ ಮತ್ತು ಜೋ ರೂಟ್ ಅವರ ಭರ್ಜರಿ ಶತಕದ ನೆರವಿನಿಂದ ಇಂಗ್ಲೆಂಡ್ 8 ವಿಕೆಟ್ಗೆ ನಷ್ಟಕ್ಕೆ 423 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. 

ಕೊನೆ ದಿನ ಭಾರತಕ್ಕೆ ಗೆಲ್ಲಲು 406 ರನ್ ಬೇಕಿದ್ದರೆ ಇಂಗ್ಲೆಂಡ್ ಗೆ 7 ವಿಕೆಟ್ ಗಳ ಗುರಿಯಿದೆ.

loader