ಸೌತಾಂಪ್ಟನ್[ಆ.30]: ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಮೂರನೇ ವಿಕೆಟ್ ಕಳೆದುಕೊಂಡಿದ್ದು, ಜಾನಿ ಬೈರ್’ಸ್ಟೋ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ಆರಂಭಿದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದು, ಬುಮ್ರಾ ಎರಡನೇ ವಿಕೆಟ್ ಕಬಳಿಸುವ ಮೂಲಕ ಆಂಗ್ಲರಿಗೆ ಶಾಕ್ ನೀಡಿದ್ದಾರೆ. 6 ರನ್ ಬಾರಿಸಿದ್ದ ಬೈರ್’ಸ್ಟೋ ವಿಕೆಟ್ ಕೀಪರ್ ರಿಶಭ್ ಪಂತ್’ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ದಾರೆ.

ಇದೀಗ ಇಂಗ್ಲೆಂಡ್ 28 ರನ್’ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದು ಕುಕ್ 17 ಹಾಗೂ ಬೆನ್ ಸ್ಟೋಕ್ಸ್ ಕ್ರೀಸ್ ನಲ್ಲಿದ್ದಾರೆ.