ಕುಕ್ ಎರಡನೇ ಇನ್ನಿಂಗ್ಸ್’ನಲ್ಲಿ 76 ರನ್ ಬಾರಿಸುತ್ತಿದ್ದಂತೆಯೇ ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟರು. ಈ ಮೂಲಕ 5ನೇ ಸ್ಥಾನದಲ್ಲಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ.

ಓವಲ್[ಸೆ.10]: ವೃತ್ತಿಜೀವನದ ವಿದಾಯದ ಪಂದ್ಯವನ್ನಾಡುತ್ತಿರುವ ಇಂಗ್ಲೆಂಡ್’ನ ಎಡಗೈ ಆರಂಭಿಕ ಬ್ಯಾಟ್ಸ್’ಮನ್ ಆಲಿಸ್ಟರ್ ಕುಕ್ ಭರ್ಜರಿ ಶತಕ(33ನೇ ಶತಕ] ಸಿಡಿಸುವ ಮೂಲಕ ಸ್ಮರಣಿಯವಾಗಿಸಿಕೊಂಡಿದ್ದಾರೆ. ಇದರ ಜತೆಗೆ ಹಲವಾರು ಮೈಲಿಗಲ್ಲುಗಳನ್ನು ನಿರ್ಮಿಸಿ ಮಿಂಚಿದ್ದಾರೆ.

Scroll to load tweet…

ಹೌದು, ಕುಕ್ ಎರಡನೇ ಇನ್ನಿಂಗ್ಸ್’ನಲ್ಲಿ 76 ರನ್ ಬಾರಿಸುತ್ತಿದ್ದಂತೆಯೇ ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟರು. ಈ ಮೂಲಕ 5ನೇ ಸ್ಥಾನದಲ್ಲಿದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಕುಮಾರ ಸಂಗಕ್ಕರ 134 ಟೆಸ್ಟ್’ಗಳಲ್ಲಿ 12,400 ರನ್ ಬಾರಿಸಿದ್ದರು. ಇದೀಗ ವೃತ್ತಿ ಜೀವನದ 161ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕುಕ್ ಲಂಕಾ ಆಟಗಾರನನ್ನು ಹಿಂದಿಕ್ಕಿದ್ದಾರೆ. 

Scroll to load tweet…
Scroll to load tweet…

ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಸಿಡಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. 200 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಸಚಿನ್ ಒಟ್ಟು 15921 ರನ್ ಸಿಡಿಸಿದ್ದರು.

ಟೆಸ್ಟ್ ಟಾಪ್ ಸ್ಕೋರರ್ ನಿಮ್ಮ ಮುಂದೆ

ಆಟಗಾರ ಪಂದ್ಯ ರನ್

ಸಚಿನ್ ತೆಂಡುಲ್ಕರ್ 200 15,921
ರಿಕಿ ಪಾಂಟಿಂಗ್ 168 13,378
ಜ್ಯಾಕ್ ಕಾಲಿಸ್ 166 13,289
ರಾಹುಲ್ ದ್ರಾವಿಡ್ 164 13288
ಅಲಿಸ್ಟರ್ ಕುಕ್ 161* 12,411* 

ಇನ್ನು ಇದೇವೇಳೆ ಕುಕ್ ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಎಡಗೈ ಬ್ಯಾಟ್ಸ್’ಮನ್ ಎನ್ನುವ ದಾಖಲೆಗೂ ಪಾತ್ರರಾದರು.

ಗರಿಷ್ಠ ರನ್ ಸಿಡಿಸಿದ ಎಡಗೈ ಬ್ಯಾಟ್ಸ್’ಮನ್’ಗಳು
ಆಲಿಸ್ಟರ್ ಕುಕ್ 12,401*
ಕುಮಾರ ಸಂಗಕ್ಕರ: 12,400
ಬ್ರಿಯಾನ್ ಲಾರಾ: 11,953
ಶಿವನಾರಾಯಣ್ ಚಂದ್ರಪಾಲ್: 11,867
ಅಲನ್ ಬಾರ್ಡರ್: 11,174

ಇದಷ್ಟೇ ಅಲ್ಲದೇ ಪದಾರ್ಪಣಾ ಹಾಗೂ ವಿದಾಯದ ಪಂದ್ಯದಲ್ಲಿ ಶತಕ ಸಿಡಿಸಿದ ವಿಶ್ವದ 5ನೇ ಆಟಗಾರ ಎನ್ನುವ ಕೀರ್ತಿಗೂ ಕುಕ್ ಪಾತ್ರರಾಗಿದ್ದಾರೆ.

ಆಟಗಾರ ಪದಾರ್ಪಣಾ ಪಂದ್ಯ ವಿದಾಯದ ಪಂದ್ಯ
ರೆಗ್ಗಿ ಡೆಪ್ 104 146
ಬಿಲ್ ಪೋನ್ಸ್’ಪೋರ್ಡ್ 110 266
ಗ್ರೇಗ್ ಚಾಪೆಲ್ 108 182
ಮೊಹಮ್ಮದ್ ಅಜರುದ್ದೀನ್ 110 102
ಅಲಿಸ್ಟರ್ ಕುಕ್ 104* 101*