ಇಸ್ಲಾಮಾಬಾದ್(ನ.20): ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ಇಮ್ರಾನ್ ಖಾನ್ ತಮಗೆ ಮೂರನೇ ವಿವಾಹವಾಗುವ ಯೋಗ ಒದಗಿಬಂದಿದೆ ಎಂದು ಸುಳಿವು ನೀಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮತ್ತೊಂದು ಮದುವೆಯಾಗುವ ಯೋಚನೆಯಿದೆ ಎಂದಿದ್ದ ಇಮ್ರಾನ್, ಇತ್ತೀಚೇಗಷ್ಟೇ ಲಂಡನ್‌ನಲ್ಲಿ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಮಾತನಾಡಿದ ಅವರು ಮದುವೆಯಲ್ಲಿ ‘‘3ನೇ ಬಾರಿ ಅದೃಷ್ಠ’’ ಒಲಿಯಲಿದೆ ಎಂದಷ್ಟೇ ಹೇಳಿ ಆಶ್ಚರ್ಯ ಮೂಡಿಸಿದ್ದರು.

ತೆಹ್ರಿಖ್-ಇ-ಇನ್ಸಾಫ್ ಮುಖ್ಯಸ್ಥರಾದ 64 ವರ್ಷ ವಯಸ್ಸಿನ ಇಮ್ರಾನ್ 3ನೇ ಮದುವೆ ಆಗುತ್ತಿರುವುದಕ್ಕೆ ಆಪ್ತೇಷ್ಟರು ಶುಭಾಶಯ ಹೇಳಿದ್ದಾರೆ.

ಇಮ್ರಾನ್ ಕಳೆದ ವರ್ಷವಷ್ಟೇ ರೆಹಮ್ ಖಾನ್ ಅವರನ್ನು 2ನೇ ಮದುವೆ ಮತ್ತು 1995ರಲ್ಲಿ ಜೆಮಿಮಾ ಗೋಲ್ಡ್‌ಸ್ಮಿತ್ ಅವರನ್ನು ಮೊದಲ ಪತ್ನಿಯಾಗಿ ವರಿಸಿದ್ದರು.