ನಾನು 12 ಬಾರಿ ಸರ್ಜರಿಗೆ ಒಳಗಾಗಿದ್ದೇನೆ. ಯಾರಾದರೊಬ್ಬ ಕ್ರೀಡಾಪಟುವನ್ನು ಕೇಳಿ ನೋಡಿ, ಸರ್ಜರಿಗೊಳಗಾದ ಬಳಿಕ ತಂಡಕ್ಕೆ ಕಮ್'ಬ್ಯಾಕ್ ಮಾಡುವುದು ಎಷ್ಟು ಕಷ್ಟವಿರುತ್ತದೆ ಎಂದು ತಿಳಿಯುತ್ತದೆ. ನಾನು 12 ಬಾರಿ ಕತ್ತಿಯ ಮೇಲೆ ನಿಂತಂತಹ ಒತ್ತಡವನ್ನು ಎದುರಿಸಿದ್ದೇನೆ ಎಂದು ನೆಹ್ರಾ ಹೇಳಿದ್ದಾರೆ

ನವದೆಹಲಿ(ಅ.03) :ಐಪಿಎಲ್ ವೇಳೆ ಗಾಯಗೊಂಡು ಭಾರತ ತಂಡದಿಂದ ದೂರವಿದ್ದ ಹಿರಿಯ ವೇಗಿ ಆಶಿಶ್ ನೆಹ್ರಾ ತಂಡಕ್ಕೆ ವಾಪಸಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೂರು ಟಿ20 ಪಂದ್ಯಗಳ ಸರಣಿಗೆ ತಂಡದಲ್ಲಿ ಅವರಿಗೆ ಸ್ಥಾನ ನೀಡಲಾಗಿದೆ.

ತಂಡಕ್ಕೆ ತಮ್ಮ ವಾಪಸಾತಿ ಕುರಿತು ಮಾತನಾಡಿರುವ ಅವರು ‘ಭಾರತ ಪರ ಆಡಲು ಯಾರಿಗೆ ತಾನೇ ಖುಷಿಯಾಗುವುದಿಲ್ಲ ಹೇಳಿ. ನಾನು ಚೆನ್ನಾಗಿ ಆಡಿದರೆ ಅದು ಸುದ್ದಿಯಾಗುತ್ತದೆ. ನಾನು ಆಡದಿದ್ದರೆ ದೊಡ್ಡ ಸುದ್ದಿಯಾಗುತ್ತದೆ ಅಷ್ಟೇ ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ನೆಹ್ರಾ ಹೇಳಿದ್ದಾರೆ.

ನಾನು 12 ಬಾರಿ ಸರ್ಜರಿಗೆ ಒಳಗಾಗಿದ್ದೇನೆ. ಯಾರಾದರೊಬ್ಬ ಕ್ರೀಡಾಪಟುವನ್ನು ಕೇಳಿ ನೋಡಿ, ಸರ್ಜರಿಗೊಳಗಾದ ಬಳಿಕ ತಂಡಕ್ಕೆ ಕಮ್'ಬ್ಯಾಕ್ ಮಾಡುವುದು ಎಷ್ಟು ಕಷ್ಟವಿರುತ್ತದೆ ಎಂದು ತಿಳಿಯುತ್ತದೆ. ನಾನು 12 ಬಾರಿ ಕತ್ತಿಯ ಮೇಲೆ ನಿಂತಂತಹ ಒತ್ತಡವನ್ನು ಎದುರಿಸಿದ್ದೇನೆ ಎಂದು ನೆಹ್ರಾ ಹೇಳಿದ್ದಾರೆ

ನನ್ನ ಅವಶ್ಯಕತೆ ಇದೆ ಎಂದು ನಾಯಕನಿಗೆ, ಆಯ್ಕೆಗಾರರಿಗೆ ಅನಿಸಿದೆ. ಅದಕ್ಕಾಗಿ ಆಯ್ಕೆ ಮಾಡಿದ್ದಾರೆ. ನಾನು ಯಾವುದೇ ಟೀಕೆಗಳಿಗೆ ಕಿವಿಗೊಡುವುದಿಲ್ಲ’ ಎಂದು ನೆಹ್ರಾ ಹೇಳಿದ್ದಾರೆ.