ಲಾರ್ಡ್ಸ್ ಮೈದಾನದಲ್ಲಿಂದು ಸಹಾಯಾರ್ಥ ಟಿ-ಟ್ವೆಂಟಿ ಪಂದ್ಯ

ICC World XI Set to Face Windies in Charity T20 Tie at Lord's
Highlights

ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿಂದು ವೆಸ್ಟ್ಇಂಡೀಸ್ ಹಾಗೂ ವಿಶ್ವಇಲೆವೆನ್ ತಂಡಗಳ ನಡುವೆ ಏಕೈಕ ಸಹಾಯಾರ್ಥ ಟಿ-ಟ್ವೆಂಟಿ ಪಂದ್ಯ ಆಯೋಜಿಸಲಾಗಿದೆ. 

ಲಂಡನ್(ಮೇ.31) ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿಂದು  ವೆಸ್ಟ್ಇಂಡೀಸ್ ಹಾಗೂ ವಿಶ್ವಇಲೆವೆನ್ ನಡುವೆ ಏಕೈಕ ಸಹಾಯಾರ್ಥ ಟಿ-ಟ್ವೆಂಟಿ ಪಂದ್ಯವನ್ನ ಆಯೋಜಿಸಲಾಗಿದೆ.  ಇಂದು ರಾತ್ರಿ 10.30ಕ್ಕೆ ಆರಂಭವಾಗಲಿರುವ ಸಹಾಯಾರ್ಥ್ ಟಿ-ಟ್ವೆಂಟಿ ಪಂದ್ಯ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. 

2017ರಲ್ಲಿ ಕೆರಿಬಿಯನ್‌ನ ಇರ್ಮಾ ಹಾಗೂ ಮರಿಯಾ ಭಾಗಗಳಿಗೆ ಅಪ್ಪಳಿಸಿದ ಚಂಡಮಾರುತದಿಂದ ಅಪಾರ ಹಾನಿ ಸಂಭವಿಸಿತ್ತು. ಹೀಗಾಗಿ ಸಯಾರ್ಥ ಪಂದ್ಯದ ಮೂಲಕ ನೆರವು ನೀಡಲು ಐಸಿಸಿ ಈ ಪಂದ್ಯ ಆಯೋಜಿಸಿದೆ. ವಿಶ್ವಇಲೆವೆನ್ ತಂಡವನ್ನ ಪಾಕಿಸ್ತಾನ ಮಾಜಿ ನಾಯಕ ಶಾಹೀದ್ ಅಫ್ರಿಧಿ ಮುನ್ನಡೆಸಲಿದ್ದಾರೆ. ವಿಶ್ವಇಲೆವೆನ್ ತಂಡದಲ್ಲಿ ಭಾರತದ ದಿನೇಶ್ ಕಾರ್ತಿಕ್ ಕೂಡ ಸ್ಥಾನ ಪಡೆದಿದ್ದಾರೆ. ಇನ್ನು ವಿಂಡೀಸ್ ತಂಡವನ್ನು ಕಾರ್ಲೋಸ್ ಬ್ರಾಥ್ವೈಟ್ ಮುನ್ನಡೆಸಲಿದ್ದಾರೆ. ಏಕೈಕ ಸಹಾಯಾರ್ಥ ಪಂದ್ಯವನ್ನು ಸೋನಿ ಸಿಕ್ಸ್ ಹಾಗೂ ಸೋನಿ ಸಿಕ್ಸ್ ಹೆಚ್‌ಡಿ ಪ್ರಸಾರ ಮಾಡಲಿದೆ. ಇಷ್ಟೇ ಅಲ್ಲ, ಫೇಸ್‌ಬುಕ್‌ನಲ್ಲಿ ಐಸಿಸಿ ನೇರಪ್ರಸಾರ ನೀಡಲಿದೆ. 

ವಿಶ್ವಇಲೆವೆನ್ ತಂಡ: ಶಾಹಿದ್ ಆಫ್ರಿದಿ(ನಾ), ಸ್ಯಾಮ್ ಬಿಲ್ಲಿಂಗ್ಸ್, ಸ್ಯಾಮ್ ಕರಣ್, ತಮೀಮ್ ಇಕ್ಬಾಲ್, ತೈಮಲ್ ಮಿಲ್ಸ್, ದಿನೇಶ್ ಕಾರ್ತಿಕ್, ರಶೀದ್ ಖಾನ್, ಸಂದೀಪ್ ಲಮಿಚಾನೆ, ಮಿಚೆಲ್ ಮೆಕ್ಲೆನಾಘನ್, ಶೋಯಿಬ್ ಮಲ್ಲಿಕ್, ತಿಸರಾ ಪರೇರಾ , ಲ್ಯೂಕ್ ರೊಂಚಿ ಹಾಗು ಆದಿಲ್ ರಶೀದ್

ವೆಸ್ಟ್ಇಂಡೀಸ್ ತಂಡ : ಕಾರ್ಲೋಸ್ ಬ್ರಾಥ್ವೇಟ್(ನಾ), ಕ್ರಿಸ್ ಗೇಲ್, ಇವಿನ್ ಲಿವಿಸ್, ಆಂಡ್ರೆ ಫ್ಲೆಚರ್, ರೋವ್‌ಮಾನ್ ಪೊವೆಲ್, ಮಾರ್ಲನ್ ಸಾಮ್ಯುಯೆಲ್ಸ್, ದಿನೇಶ್ ರಾಮ್ದಿನ್, ಸಾಮ್ಯುಯೆಲ್ ಬದ್ರಿ, ಆಶ್ಲೆ ನರ್ಸ್, ಆಂಡ್ರೆ ರಸೆಲ್, ರಾಯದ್ ಇಮ್ರಿತ್, ಕೀಮೋ ಪೌಲ್ ಹಾಗೂ ಕೆಸ್ರಿಕ್ ವಿಲಿಯಮ್ಸ್


 

loader