ಹಿರಿಯ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಭಾರತದ ಮಹಿಳಾ ತಂಡವನ್ನು ಮುನ್ನೆಡೆಸಲಿದ್ದಾರೆ.

ನವದೆಹಲಿ(ಮೇ.16): ಇದೇ ಜೂನ್ 24ರಿಂದ ಇಂಗ್ಲೆಂಡ್'ನಲ್ಲಿ ಆರಂಭವಾಗಲಿರುವ ಮಹಿಳಾ ವಿಶ್ವಕಪ್'ಗೆ ಬಿಸಿಸಿಐ 15 ಆಟಗಾರ್ತಿಯರನ್ನೊಳಗೊಂಡ ತಂಡವನ್ನು ಪ್ರಕಟಿಸಲಾಗಿದೆ.

ಸದ್ಯ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಚತುಷ್ಕೋನ ಟೂರ್ನಿಯಲ್ಲಿ ಭಾಗವಹಿಸಿರುವ ತಂಡವನ್ನೇ ವಿಶ್ವಕಪ್ ಟೂರ್ನಿಗೆ ಉಳಿಸಿಕೊಳ್ಳಲಾಗಿದ್ದು, ಹಿರಿಯ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಭಾರತದ ಮಹಿಳಾ ತಂಡವನ್ನು ಮುನ್ನೆಡೆಸಲಿದ್ದಾರೆ.

ಭಾರತ ತಂಡ ಹೀಗಿದೆ:

ಮಿಥಾಲಿ ರಾಜ್(ನಾಯಕಿ), ಹರ್ಮನ್ ಪ್ರೀತ್, ವೇದಾ ಕೃಷ್ಣಮೂರ್ತಿ,ಮೊನಾ ಮೆಶ್ರಾಮ್, ಪೂನಂ ರಾವತ್, ದೀಪ್ತಿ ಶರ್ಮಾ, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಏಕ್ತಾ ಬಿಸ್ತಾ, ಸುಶಾಮ್ ವರ್ಮಾ, ಮನ್ಸಿ ಜೋಶಿ, ರಾಜೇಶ್ವರಿ ಗಾಯಕ್ವಾಡ್, ಪೂನಂ ಯಾದವ್, ನುಜಾತ್ ಫರ್ವೀನ್, ಸ್ಮೃತಿ ಮಂದಣ್ಣ.