2018ರ ಫೆ.5ರಿಂದ 10ರ ತನಕ ದ.ಆಫ್ರಿಕಾ ಪ್ರವಾಸದಲ್ಲಿ ಭಾರತ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

ದುಬೈ(ಅ.10): ಐಸಿಸಿ ಮಹಿಳಾ ಚಾಂಪಿಯನ್‌'ಶಿಪ್‌'ನ 2ನೇ ಆವೃತ್ತಿ 2017ರಿಂದ 2020ರ ತನಕ ನಡೆಯಲಿದ್ದು, ಮೊದಲ ಸುತ್ತಿನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ.

2018ರ ಫೆ.5ರಿಂದ 10ರ ತನಕ ದ.ಆಫ್ರಿಕಾ ಪ್ರವಾಸದಲ್ಲಿ ಭಾರತ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. 2014ರಿಂದ16ರ ತನಕ ನಡೆದ ಮೊದಲ ಆವೃತ್ತಿ ಮಾದರಿಯಲ್ಲೇ 2ನೇ ಆವೃತ್ತಿ ಸಹ ನಡೆಯಲಿದೆ.

ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಹಾಗೂ ವೆಸ್ಟ್‌ಇಂಡೀಸ್ ಒಳಗೊಂಡಂತೆ ಎಲ್ಲಾ 8 ತಂಡಗಳು ತವರಿನಲ್ಲಿ ಅಥವಾ ತವರಿನಾಚೆ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಪರಸ್ಪರ ಎದುರಾಗಲಿವೆ.