ದುಬೈ(ಮೇ.18): ಟೆಸ್ಟ್  ಅಭಿವೃದ್ಧಿ ಹಾಗೂ ಅವುಗಳನ್ನು ಮತ್ತಷ್ಟು ಸ್ಪರ್ಧಾತ್ಮಕಗೊಳಿಸುವ  ನಿಟ್ಟಿನಲ್ಲಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಂದಾಗಿದೆ. ಈ  ನಿಟ್ಟಿನಲ್ಲಿ ಟಾಸ್ ಅನ್ನೇ ರದ್ದುಗೊಳಿಸಲು ಐಸಿಸಿ ಚಿಂತನೆ ನಡೆಸಿದೆ.
ಒಂದೊಮ್ಮೆ ಇದು ಕಾರ್ಯರೂಪಕ್ಕೆ ಬಂದರೆ ಕ್ರಿಕೆಟ್'ನ ಸಾಂಪ್ರಾದಾಯಿಕ ನಡೆಗೆ ಇತಿಶ್ರೀ ಹಾಡಿದಂತೆ ಆಗುತ್ತದೆ. ಮೇ 28, 29ರಂದು ಮುಂಬೈನಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ. ಒಂದೊಮ್ಮೆ ಆತಿಥೇಯ ತಂಡ ಟಾಸ್ ಗೆದ್ದರೆ, ಅದಕ್ಕೆ ಸ್ಥಳೀಯ ಪರಿಸ್ಥಿತಿಯ ಬಗ್ಗೆ ಹೆಚ್ಚು ಅರಿವಿರುವ ಕಾರಣ  ಬ್ಯಾಟಿಂಗ್  ಇಲ್ಲವೇ  ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತದೆ. 
ಇದರಿಂದ ಅದಕ್ಕೆ ಹೆಚ್ಚಿನ ಲಾಭವಾಗುದ್ದು, ಇತ್ತೀಚಿನ ದಿನಗಳಲ್ಲಿ ಪಂದ್ಯಗಳು ಬೇಗನೆ ಮುಕ್ತಾಯಗೊಳ್ಳುತ್ತಿವೆ. ಈ  ನಿಟ್ಟಿನಲ್ಲಿ ಟೆಸ್ಟ್  ಪಂದ್ಯಗಳನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಲು ಪ್ರವಾಸಿ ತಂಡದ ನಾಯಕನಿಗೆ  ಬ್ಯಾಟಿಂಗ್  ಇಲ್ಲವೇ  ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ವಿವೇಚನೆಯನ್ನು ಆತನಿಗೆ  ನೀಡಲು ಐಸಿಸಿ ಚಿಂತನೆ ನಡೆಸಿ ದೆ.
2016ರಲ್ಲಿ ಪ್ರಯೋಗ:

1877ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಮೊದಲ ಟೆಸ್ಟ್'ನಿಂದ ಇಲ್ಲಿಯ ತನಕ ಪ್ರತಿ ಪಂದ್ಯದಲ್ಲೂ ಟಾಸ್ ಹಾಕಲಾಗುತ್ತಿದೆ. ಇದೀಗ ಟಾಸ್ ಅನ್ನು ಕೈಬಿಟ್ಟರೆ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಲಿದೆ. ಈ ರೀತಿ ಟಾಸ್ ಇಲ್ಲದೆಯೇ ಪ್ರವಾಸಿ ತಂಡಕ್ಕೆ ಬ್ಯಾಟಿಂಗ್ ಅಥವಾ  ಬೌಲಿಂಗ್  ಆಯ್ಕೆ ಮಾಡುವ
ಪ್ರಯೋಗವನ್ನು 2016ರಲ್ಲಿ ಸ್ಥಳೀಯ ಪಂದ್ಯಾವಳಿ (ಕೌಂಟಿ ಚಾಂಪಿಯನ್'ಶಿಪ್) ವೇಳೆ ಇಂಗ್ಲೆಂಡ್ ಹಾಗೂ ಭಾರತ ನಡೆಸಿತ್ತು. ಇಂಗ್ಲೆಂಡ್ ಮತ್ತು ವೆಸ್ಟ್  ಇಂಡೀಸ್ ಕ್ರಿಕೆಟ್ ಮಂಡಳಿ ನಡುವೆ ನಡೆದ ಪಂದ್ಯಗಳ ವೇಳೆ ನಡೆಸಿದ ಈ ಪ್ರಯೋಗ ಫಲ ಸಹ  ನೀಡಿತ್ತು. ಪಂದ್ಯಗಳು ದೀರ್ಘಕಾಲದ ವರೆಗೆ ನಡೆದಿದಲ್ಲ  ಇದೇ, ಸ್ಪರ್ಧಾತ್ಮಕವಾಗಿದ್ದವು.
ಆದರೆ, ಭಾರತದಲ್ಲಿ ಇದು ಯಶ ಕಂಡಿರಲಿಲ್ಲ. ಇದಾದ ಬಳಿಕ ಈ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ.
ದಿಗ್ಗಜರ ಸಮಿತಿ ರಚನೆ: 
ಅನಿಲ್  ಕುಂಬ್ಳೆ, ರಾಹುಲ್  ದ್ರಾವಿಡ್, ಮಹೇಲಾ ಜಯವರ್ಧನೆ, ಆ್ಯಂಡ್ರೂ ಸ್ಟ್ರಾಸ್, ವಿವಿಯನ್ ರಿಚರ್ಡ್,ಕೆಟಲಟರೋ, ರಂಜನ್ ಮದುಗಲೆ,ಶಾನ್ ಪೊಲಾಕ್, ಮುಂತಾದವರನ್ನು ಒಳಗೊಂಡ ಸಮಿತಿ ಈ ಕುರಿತು ಚರ್ಚೆ ನಡೆಸಲಿದೆ.