2009ರಲ್ಲಿ ಶ್ರೀಲಂಕಾ ತಂಡದ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಜಿಂಬಾಬ್ವೆ ಹೊರತುಪಡಿಸಿ ಉಳಿದ್ಯಾವ ತಂಡವೂ ಸಹ ಪಾಕಿಸ್ತಾನ ಪ್ರವಾಸ ಕೈಗೊಳ್ಳದೆ ಇರುವುದು, ದೇಶದ ಕ್ರಿಕೆಟ್ ಮಂಡಳಿಗೆ ಭಾರೀ ನಷ್ಟ ಉಂಟು ಮಾಡಿದೆ.

ದುಬೈ(ಏ.27): ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಲು ಐಸಿಸಿ ವಿಶೇಷ ಕಾಳಜಿ ತೋರುತ್ತಿದ್ದು, ವಿಶ್ವ ಇಲೆವೆನ್ ತಂಡವನ್ನು ಒಳಗೊಂಡಂತೆ ಟಿ20 ಸರಣಿಯನ್ನು ಆಯೋಜಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಬದ್ಧವಾಗಿದೆ ಎನ್ನಲಾಗಿದೆ.

2009ರಲ್ಲಿ ಶ್ರೀಲಂಕಾ ತಂಡದ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಜಿಂಬಾಬ್ವೆ ಹೊರತುಪಡಿಸಿ ಉಳಿದ್ಯಾವ ತಂಡವೂ ಸಹ ಪಾಕಿಸ್ತಾನ ಪ್ರವಾಸ ಕೈಗೊಳ್ಳದೆ ಇರುವುದು, ದೇಶದ ಕ್ರಿಕೆಟ್ ಮಂಡಳಿಗೆ ಭಾರೀ ನಷ್ಟ ಉಂಟು ಮಾಡಿದೆ. ‘‘ಭದ್ರತೆ ಹಾಗೂ ಪ್ರಾಯೋಜಕ್ವವನ್ನು ಗಮನದಲ್ಲಿಟ್ಟುಕೊಂಡು, ವಿಶ್ವ ಇಲೆವೆನ್ ತಂಡವನ್ನು ಒಳಗೊಂಡ 4 ಪಂದ್ಯಗಳ ಟಿ20 ಸರಣಿಯ ಆಯೋಜನೆಯನ್ನು ಪರಿಗಣಿಸಲಾಗುತ್ತಿದೆ’’ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇತ್ತೀಚೆಗೆ ನಡೆದ ಪಾಕಿಸ್ತಾನ ಸೂಪರ್ ಲೀಗ್ ೈನಲ್ ವೇಳೆ ಭದ್ರತೆ ಪರಿಶೀಲನೆಗೆಂದು ಐಸಿಸಿ ವಿಶೇಷ ತಂಡವೊಂದನ್ನು ಲೋಹಾರ್‌ಗೆ ಕಳುಹಿಸಿತ್ತು. ಭದ್ರತೆ ಕುರಿತು ವಿಶೇಷ ತಂಡ ನೀಡಿರುವ ವರದಿ ಐಸಿಸಿಗೆ ಸಮಾಧಾನ ತಂದಿದ್ದು, ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಪಂದ್ಯಾವಳಿ ಆಯೋಜಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.