2019ರಲ್ಲಿ ಟೆಸ್ಟ್ ಚಾಂಪಿಯನ್‌'ಶಿಪ್‌'ನ ಮೊದಲ ಆವೃತ್ತಿ ನಡೆಯಲಿದೆ

ವೆಲ್ಲಿಂಗ್‌'ಟನ್(ಅ.10): ದೀರ್ಘಕಾಲದಿಂದ ಚರ್ಚಿತವಾಗುತ್ತಿರುವ ಟೆಸ್ಟ್ ಚಾಂಪಿಯನ್‌'ಶಿಪ್‌'ಗೆ ಮಾನ್ಯತೆ ನೀಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮುಂದಾಗಿದ್ದು, ಶುಕ್ರವಾರ ನ್ಯೂಜಿಲೆಂಡ್‌'ನಲ್ಲಿ ನಡೆಯಲಿರುವ ಸಭೆಯಲ್ಲಿ ಘೋಷಣೆ ಮಾಡುವ ಸಾಧ್ಯತೆಯಿದೆ.

ಏಕದಿನ ಹಾಗೂ ಟಿ20 ಕ್ರಿಕೆಟ್ ವಿಶ್ವಕಪ್ ಮಾದರಿಯಲ್ಲಿ ಟೆಸ್ಟ್ ಚಾಂಪಿಯನ್‌'ಶಿಪ್ ನಡೆಸಲು 2010ರಿಂದ ಚಿಂತನೆ ನಡೆಯುತ್ತಿದೆ.

ಇದೀಗ ಅದರ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಲಿರುವ ಸಭೆಯಲ್ಲಿ ಐಸಿಸಿ ಮಾನ್ಯತೆ ನೀಡಲಿದೆ ಎಂದು ವರದಿಗಳು ತಿಳಿಸಿವೆ. 2019ರಲ್ಲಿ ಟೆಸ್ಟ್ ಚಾಂಪಿಯನ್‌'ಶಿಪ್‌'ನ ಮೊದಲ ಆವೃತ್ತಿ ನಡೆಯಲಿದೆ