2017ರ ಅಕ್ಟೋಬರ್ ವೇಳೆಗೆ ಟಿ20ಯಲ್ಲಿ ಡಿಆರ್'ಎಸ್ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.
ಲಂಡನ್(ಮೇ.26): ಅಂತರಾಷ್ಟ್ರೀಯ ಕ್ರಿಕೆಟ್ ಕಮಿಟಿಯು ಟಿ20 ಪಂದ್ಯಗಳಲ್ಲೂ ಅಂಪೈರ್ ತೀರ್ಪು ಮೇಲ್ಮನವಿ ಪದ್ಧತಿ (ಯುಡಿಆರ್‌ಎಸ್) ಅಳವಡಿಸಬೇಕು ಎಂದು ಶಿಫಾರಸು ಮಾಡಿದೆ.
ಭಾರತ ತಂಡದ ಕೋಚ್ ಅನಿಲ್ ಕುಂಬ್ಳೆ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಯಿತು.
ಈ ತೀರ್ಮಾನದ ಜತೆಗೆ ಮೈದಾನದಲ್ಲಿ ಆಟಗಾರರು ಅಸಭ್ಯವಾಗಿ ವರ್ತಿಸಿದಾಗ ಅವರನ್ನು ಹೊರಗಟ್ಟಲು ಅಂಪೈರ್'ಗಳಿಗೆ ಅಧಿಕಾರ ನೀಡಬೇಕು ಎನ್ನುವ ಬಗ್ಗೆಯೂ ಚರ್ಚೆ ನಡೆದಿದೆ.
ಡಿಆರ್'ಎಸ್'ಗೆ ಮೊರೆ ಹೋದಾಗ, ಒಂದೊಮ್ಮೆ ಎಲ್'ಬಿ ಅಂಪೈರ್ ತೀರ್ಮಾನವೆಂದು ಬಂದಾಗ ತಂಡಗಳು ಮನವಿ ಕಳೆದುಕೊಳ್ಳುವುದು ಬೇಡ ಎನ್ನುವ ಪ್ರಸ್ತಾಪವನ್ನೂ ಮಾಡಲಾಯಿತು.
2017ರ ಅಕ್ಟೋಬರ್ ವೇಳೆಗೆ ಟಿ20ಯಲ್ಲಿ ಡಿಆರ್'ಎಸ್ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.
ಐಸಿಸಿ ಕಮಿಟಿಯಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್, ಆ್ಯಂಡ್ರೂ ಸ್ಟ್ರಾಸ್, ಮಹೇಲ ಜಯವರ್ಧನೆ ಹಾಗೂ ಡ್ಯಾರನ್ ಲೆಹ್ಮನ್ ಸದಸ್ಯರಾಗಿದ್ದು, ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದಾರೆ.
