ಸತತ ಎರಡನೇ ಬಾರಿಗೆ ಇಂಗ್ಲೆಂಡ್ ತಂಡ ಅತಿಥ್ಯ ವಹಿಸಿದೆ. ನಾಳೆ ಉದ್ಘಾಟನಾ ಪಂದ್ಯ ಶುರುವಾದರೆ ಉಳಿದ 18 ದಿನ ಚಾಂಪಿಯನ್​ ಟ್ರೋಫಿ ಕಿಕ್  ನೀಡಲಿದೆ. ಮಿನಿ ವಿಶ್ವಕಪ್​​ ಎಂದೇ ಬಿಂಬಿತವಾಗಿರುವ ಚಾಂಪಿಯನ್ಸ್​​​ ಟ್ರೋಫಿಯಲ್ಲಿ ಐಸಿಸಿ ರಾಂಕಿಂಗ್'ನ  ಅಗ್ರ 8 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. 8 ತಂಡಗಳನ್ನೂ ನಾಲ್ಕರಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ.

ಐಪಿಎಲ್ ನಂತರ ಯಾವುದೇ ಟೂರ್ನಿಗಳಿಲ್ಲದೆ ಮಂಕಾಗಿದ್ದ ಕ್ರಿಕೆಟ್​​ ಅಭಿಮಾನಿಗಳಿಗೆ ಬ್ಯಾಕ್​​ ವಿತ್​​ ಬ್ಯಾಂಗ್​​ ಅನ್ನೋ ಹಾಗೆ ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್​​​​ ಟ್ರೋಫಿ ಆರಂಭವಾಗುತ್ತಿದೆ.

ಸತತ ಎರಡನೇ ಬಾರಿಗೆ ಇಂಗ್ಲೆಂಡ್ ತಂಡ ಅತಿಥ್ಯ ವಹಿಸಿದೆ. ನಾಳೆ ಉದ್ಘಾಟನಾ ಪಂದ್ಯ ಶುರುವಾದರೆ ಉಳಿದ 18 ದಿನ ಚಾಂಪಿಯನ್​ ಟ್ರೋಫಿ ಕಿಕ್ ನೀಡಲಿದೆ. ಮಿನಿ ವಿಶ್ವಕಪ್​​ ಎಂದೇ ಬಿಂಬಿತವಾಗಿರುವ ಚಾಂಪಿಯನ್ಸ್​​​ ಟ್ರೋಫಿಯಲ್ಲಿ ಐಸಿಸಿ ರಾಂಕಿಂಗ್'ನ ಅಗ್ರ 8 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. 8 ತಂಡಗಳನ್ನೂ ನಾಲ್ಕರಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ.

15 ಕೋಟಿ ಬಹುಮಾನ ಪಡೆಯಲು ಟಾಪ್​​​ 8 ತಂಡಗಳು ತಯಾರಿ ನಡೆಸಿವೆ. ಆದರೆ ನಡೆದಿರುವ 7 ಆವೃತಿಗಳಲ್ಲಿ 2 ಬಾರಿ ಚಾಂಪಿಯನ್ ಆಗಿರುವ ಹಾಲಿ ಚಾಂಪಿಯನ್​ ಟೀಂ ಇಂಡಿಯಾ ಈ ಬಾರಿಯೂ ಗೆದ್ದು ಬೀಗಲು ತಯಾರಿ ನಡೆಸಿದೆ. ನಾಳೆಯಿಂದ ಶುರು ಆಗಲಿರೋ ಚಾಂಪಿಯನ್ಸ್​​​ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್​-ಬಾಂಗ್ಲಾದೇಶ ಮುಖಮುಖಿಯಾಗುತ್ತಿವೆ. ತವರಿನ ಬಲ ಹೊಂದಿರುವ ಮಾರ್ಗನ್​​ ಪಡೆ ಇಂದಿನ ಪಂದ್ಯದ ಫೇವರೇಟ್​​​ ಎನ್ನಿಸಿದರೂ ಬಾಂಗ್ಲಾ ಶಾಕ್​​​ಗಳನ್ನ ಕೊಡುವುದರಲ್ಲಿ ನಿಸ್ಸೀಮರು. ಹೀಗಾಗಿ ಇಂದು ಬಿಗ್​​ ಫೈಟ್​​​ ನಿರೀಕ್ಷಿಸಬಹುದು.