ಜೋ ರೂಟ್ 129 ಎಸತಗಳಲ್ಲಿ 1 ಸಿಕ್ಸ್'ರ್ ಹಾಗೂ 11 ಬೌಂಡರಿಗಳೊಂದಿಗೆ 133 ಅಜೇಯ ಹಾಗೂ ಇಯಾನ್ ಮಾರ್ಗನ್ 61 ಚಂಡುಗಳಲ್ಲಿ 2 ಸಿಕ್ಸ್'ರ್ 8 ಬೌಂಡರಿಗಳೊಂದಿಗೆ 75 ರನ್ ಗಳಿಸಿ ಅಜೇಯರಾಗಿ ಉಳಿದರು. ಮತ್ತೊಬ್ಬ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ 86 ಎಸತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸ್'ರ್'ಗಳೊಂದಿಗೆ 95 ರನ್ ಗಳಿಸಿ ಕೇವಲ 5 ರನ್'ಗಳಿಂದ ಶತಕ ವಂಚಿತರಾದರು.
ಲಂಡನ್(ಜೂ.01): ಜೋ ರೂಟ್ ಅವರ ಅಜೇಯ ಶತಕ ಹಾಗೂ ಹೇಲ್ಸ್ ಮತ್ತು ಮಾರ್ಗನ್ ಅವರ ಅಬ್ಬರದ ಬ್ಯಾಟಿಂಗ್'ನಿಂದಾಗಿ ಇಂಗ್ಲೆಂಡ್ ಬಾಂಗ್ಲಾ ವಿರುದ್ಧ 8 ವಿಕೇಟ್'ಗಳ ಜಯ'ಗಳಿಸಿತು.
ಲಂಡನ್'ನ ಕೆನ್ನಿಂಗ್'ಟನ್ ಓವಲ್'ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಏಕದಿನ ಪಂದ್ಯದಲ್ಲಿ ಬಾಂಗ್ಲಾ ಒಡ್ಡಿದ 305 ರನ್'ಗಳ ಬೃಹತ್ ಸವಾಲನ್ನು ಇಂಗ್ಲೆಂಡ್ ತಂಡ 47.2 ಓವರ್'ಗಳಲ್ಲಿ ಗುರಿ ಮುಟ್ಟಿತು. ಆರಂಭಿಕ ಆಟಗಾರ ಜೇಸನ್ ರಾಯ್ 1 ರನ್ ಗಳಿಸಿ ಔಟಾಗಿದ್ದು ವಿಫಲವಾಗಿದ್ದು ಬಿಟ್ಟರೆ ಉಳಿದ ಮೂವರು ಆಟಗಾರರು ಅಮೋಘ ಆಟವಾಡಿ ಇಂಗ್ಲೆಂಡ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಜೋ ರೂಟ್ 129 ಎಸತಗಳಲ್ಲಿ 1 ಸಿಕ್ಸ್'ರ್ ಹಾಗೂ 11 ಬೌಂಡರಿಗಳೊಂದಿಗೆ 133 ಅಜೇಯ ಹಾಗೂ ಇಯಾನ್ ಮಾರ್ಗನ್ 61 ಚಂಡುಗಳಲ್ಲಿ 2 ಸಿಕ್ಸ್'ರ್ 8 ಬೌಂಡರಿಗಳೊಂದಿಗೆ 75 ರನ್ ಗಳಿಸಿ ಅಜೇಯರಾಗಿ ಉಳಿದರು. ಮತ್ತೊಬ್ಬ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ 86 ಎಸತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸ್'ರ್'ಗಳೊಂದಿಗೆ 95 ರನ್ ಗಳಿಸಿ ಕೇವಲ 5 ರನ್'ಗಳಿಂದ ಶತಕ ವಂಚಿತರಾದರು.
ತಮೀಮ್ ಶತಕದೊಂದಿಗೆ ಉತ್ತಮ ಮೊತ್ತ ದಾಖಲಿಸಿದ ಬಾಂಗ್ಲಾ
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ತಂಡ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್ ಅವರ ಏಕದಿನ ಪಂದ್ಯದ 9ನೇ ಶತಕ (128: 142 ಎಸೆತ, 12 ಬೌಂಡರಿ, 3 ಸಿಕ್ಸರ್) ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಮುಷ್ಫಿಕರ್ ರಹೀಮ್ (79: 72 ಎಸೆತ, 8 ಬೌಂಡರಿ) ಅವರ ಅದ್ಭುತ ಬ್ಯಾಟಿಂಗ್'ನಿಂದಾಗಿ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 305 ಬೃಹತ್ ರನ್ ಕಲೆ ಹಾಕಿತು. ಆದರೆ ಇಂಗ್ಲೆಂಡ್ ಬ್ಯಾಟ್ಸ್'ಮೆನ್'ಗಳನ್ನು ಕಟ್ಟಿ ಹಾಕಲು ಸಾಧ್ಯವಾಗದೆ ಸೋಲೊಪ್ಪಿಕೊಂಡಿತು.
ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ :50 ಓವರ್‌ಗಳಲ್ಲಿ 6 ವಿಕೆಟ್‌ಗೆ 305
(ತಮೀಮ್ 128,,ಮುಷ್ಫಿಕರ್ ರಹೀಮ್ 79 ಪ್ಲಂಕೆಟ್ 59ಕ್ಕೆ 4)
ಇಂಗ್ಲೆಂಡ್ : 47.2 ಓವರ್‌ಗಳಲ್ಲಿ 308/2
(ಅಲೆಕ್ಸ್ ಹೇಲ್ಸ್ 95,ಜೋ ರೂಟ್ ಅಜೇಯ 133(129), ಇಯಾನ್ ಮಾರ್ಗನ್ ಅಜೇಯ 75(61))
ಪಂದ್ಯ ಶ್ರೇಷ್ಠ: ಜೋ ರೂಟ್