ಕಳೆದ 5 ವರ್ಷಗಳಿಂದ ಮಾರ್ಗನ್ ಇಂಗ್ಲೆಂಡ್ ಪರ ಯಾವುದೇ ಟೆಸ್ಟ್ ಪಂದ್ಯವನ್ನಾಡಿಲ್ಲ.

ಲಂಡನ್(ಫೆ.25): ಸೀಮಿತ ಓವರ್‌ಗಳ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್, ಟೆಸ್ಟ್ ಕ್ರಿಕೆಟ್‌'ಗೆ ನಿವೃತ್ತಿ ಹೇಳುವ ಸಾಧ್ಯತೆ ಇದೆ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ 2019ರ ವಿಶ್ವಕಪ್‌'ವರೆಗೂ ತಾನೇ ನಾಯಕನಾಗಿ ಮುಂದುವರೆಯುವ ಉತ್ಸಾಹದಲ್ಲಿದ್ದಾರೆ.

ಕಳೆದ 5 ವರ್ಷಗಳಿಂದ ಮಾರ್ಗನ್ ಇಂಗ್ಲೆಂಡ್ ಪರ ಯಾವುದೇ ಟೆಸ್ಟ್ ಪಂದ್ಯವನ್ನಾಡಿಲ್ಲ. 2012ರ ಫೆಬ್ರವರಿಯಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದೇ ಕೊನೆಯ ಟೆಸ್ಟ್ ಪಂದ್ಯ.

16 ಟೆಸ್ಟ್ ಪಂದ್ಯಗಳಿಂದ 700 ರನ್ ಗಳಿಸಿರುವ 30 ವರ್ಷದ ಮಾರ್ಗನ್ ಅವರನ್ನು ಪ್ರಸಕ್ತ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 2 ಕೋಟಿ ಹಣ ನೀಡಿ ಖರೀದಿಸಿದೆ. ಇದು ಮಾರ್ಗನ್ ಅವರ ಮೂಲ ಧನವಾಗಿತ್ತು.