ನಾನು ಮೊದಲು ತಾಳ್ಮೆಯಿಂದ ಬ್ಯಾಟಿಂಗ್ ಆರಂಭಿಸುತ್ತೇನೆ. ಜೊತೆಗೆ ಎಷ್ಟು ಸಾಧ್ಯವೋ ಅಷ್ಟು ದೀರ್ಘವಾಗಿ ಬ್ಯಾಟಿಂಗ್ ನಡೆಸುತ್ತೇನೆ ಎಂದು ಶರ್ಮಾ ತಮ್ಮ ಬ್ಯಾಟಿಂಗ್ ರಹಸ್ಯ ಹೊರಹಾಕಿದ್ದಾರೆ.

ಮೊಹಾಲಿ(ಡಿ.14): ರೋಹಿತ್ ಶರ್ಮಾ ವಿಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 141 ರನ್'ಗಳ ಭರ್ಜರಿ ಜಯಭೇರಿ ಬಾರಿಸಿದೆ.

ಏಕದಿನ ಕ್ರಿಕೆಟ್'ನಲ್ಲಿ ಮೂರು ದ್ವಿಶತಕ ಸಿಡಿಸಿ ದಾಖಲೆ ಬರೆದ ರೋಹಿತ್, ಟೀಂ ಇಂಡಿಯಾ ಮುಖ್ಯಕೋಚ್ ರವಿಶಾಸ್ತ್ರಿ ಬಳಿ ತಮ್ಮ ಬ್ಯಾಟಿಂಗ್ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. 'ನಾನು ಧೋನಿ, ಗೇಯ್ಲ್'ರಂತೆ ಬಲಿಷ್ಟ ಬ್ಯಾಟ್ಸ್'ಮನ್ ಅಲ್ಲ, ಆದರೆ ಸರಿಯಾಗಿ ಟೈಮಿಂಗ್ ಮಾಡಿ ಆಡುತ್ತೇನೆ ಎಂದು ಹೇಳಿದ್ದಾರೆ.

ನಾನು ಮೊದಲು ತಾಳ್ಮೆಯಿಂದ ಬ್ಯಾಟಿಂಗ್ ಆರಂಭಿಸುತ್ತೇನೆ. ಜೊತೆಗೆ ಎಷ್ಟು ಸಾಧ್ಯವೋ ಅಷ್ಟು ದೀರ್ಘವಾಗಿ ಬ್ಯಾಟಿಂಗ್ ನಡೆಸುತ್ತೇನೆ ಎಂದು ಶರ್ಮಾ ತಮ್ಮ ಬ್ಯಾಟಿಂಗ್ ರಹಸ್ಯ ಹೊರಹಾಕಿದ್ದಾರೆ.

Scroll to load tweet…

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡಿದ್ದು ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ 1-1 ಸಮಬಲ ಸಾಧಿಸಿದೆ. ಮೂರನೇ ಹಾಗೂ ನಿರ್ಣಾಯಕ ಪಂದ್ಯವು ಭಾನುವಾರ ವಿಶಾಖಪಟ್ಟಣಂನಲ್ಲಿ ನಡೆಯಲಿದೆ.