ಇತ್ತೀಚೆಗಷ್ಟೇ ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡ ಏಕದಿನ ಸರಣಿಯಲ್ಲಿ ಹೀನಾಯ ಪ್ರದರ್ಶನ ತೋರಿದ ಬಳಿಕವಂತೂ ಸ್ಮಿತ್ ಮೇಲೆ ಸ್ವಹಿತಾಸಕ್ತಿ ಆರೋಪಗಳು ಮತ್ತಷ್ಟು ಹೆಚ್ಚಾಗಿವೆ.  

ಸಿಡ್ನಿ(ನ.04): ತಮ್ಮ ವಿರುದ್ಧ ಕೇಳಿ ಬಂದಿದ್ದ ಸ್ವಹಿತಾಸಕ್ತಿ ಆರೋಪವನ್ನು ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ತಳ್ಳಿ ಹಾಕಿದ್ದಾರೆ.

ಸ್ಮಿತ್ ತಮಗೆ ಆಪ್ತರಾದವರಿಗೆ ತಂಡದಲ್ಲಿ ಸ್ಥಾನ ನೀಡುತ್ತಿದ್ದಾರೆ. ಇದೇ ಕಾರಣದಿಂದ ತಂಡದ ಪ್ರದರ್ಶನ ಕುಂಠಿತಗೊಂಡಿದೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸ್ಮಿತ್, ‘ನಾನೇನು ಆಯ್ಕೆ ಸಮಿತಿ ಸದಸ್ಯನಲ್ಲ. ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಆಯ್ಕೆಗಾರರೊಂದಿಗೆ ಚರ್ಚೆ ನಡೆಸುತ್ತೇನೆ ಹಾಗೂ ನನ್ನ ಅಭಿಪ್ರಾಯ ತಿಳಿಸುತ್ತೇನೆ ಅಷ್ಟೇ. ಇದನ್ನೇ ಸ್ವಹಿತಾಸಕ್ತಿ ಎನ್ನುವುದು ಸರಿಯಲ್ಲ’ ಎಂದಿದ್ದಾರೆ.

ಇತ್ತೀಚೆಗಷ್ಟೇ ಭಾರತ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ತಂಡ ಏಕದಿನ ಸರಣಿಯಲ್ಲಿ ಹೀನಾಯ ಪ್ರದರ್ಶನ ತೋರಿದ ಬಳಿಕವಂತೂ ಸ್ಮಿತ್ ಮೇಲೆ ಸ್ವಹಿತಾಸಕ್ತಿ ಆರೋಪಗಳು ಮತ್ತಷ್ಟು ಹೆಚ್ಚಾಗಿವೆ.