Asianet Suvarna News Asianet Suvarna News

ನಾನು ಒಂಥರ ವೈನ್ ಇದ್ದಂತೆ ಎಂದ ಮಾಹಿ

ಮಹೇಂದ್ರ ಸಿಂಗ್ ಧೋನಿ ಸರಿಸುಮಾರು 2 ವರ್ಷಗಳ ಬಳಿಕ ಏಕದಿನ ಕ್ರಿಕೆಟ್'ನಲ್ಲಿ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

I am like wine Dhoni on getting better with age
  • Facebook
  • Twitter
  • Whatsapp

ಆ್ಯಂಟಿಗುವಾ(ಜು.01): ನಾನು ವೈನ್ ಇದ್ದಂತೆ, ದಿನ ಕಳೆದಂತೆ ಉತ್ತಮವಾಗುತ್ತಾ ಸಾಗುತ್ತೇನೆ ಎಂದು ಮಹೇಂದ್ರ ಸಿಂಗ್ ಧೋನಿ ಚಟಾಕಿ ಹಾರಿಸಿದ್ದಾರೆ.

ವೆಸ್ಟ್‌ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಸಮಯೋಚಿತ ಅರ್ಧಶತಕ ಗಳಿಸಿದ (78 ರನ್) ಮಾಹಿ, ಬಹು ದಿನಗಳ ಬಳಿಕ ಉತ್ತಮ ಇನ್ನಿಂಗ್ಸ್ ಕಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸುದ್ದಿಗಾರರ ಪ್ರಶ್ನೆಗೆ ಹಾಸ್ಯ ದಾಟಿಯಲ್ಲಿ ಉತ್ತರ ನೀಡಿದ ಅವರು, ‘ನಾನು ವೈನ್ ಇದ್ದಂತೆ, ವಯಸ್ಸಾದಂತೆ ಮತ್ತಷ್ಟು ಉತ್ತಮಗೊಳ್ಳುತ್ತೇನೆ’ ಎಂದಿದ್ದಾರೆ.

‘ಕಳೆದ ಒಂದು, ಒಂದುವರೆ ವರ್ಷದಿಂದ ತಂಡದ ಮೇಲ್ಪಂಕ್ತಿ ಆಟಗಾರರು ಉತ್ತಮ ಮೊತ್ತ ಪೇರಿಸುತ್ತಿದ್ದಾರೆ. ಹಾಗಾಗಿ ಕೆಳಕ್ರಮಾಂಕದಲಲ್ಲಿ ನನಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗುತ್ತಿರಲಿಲ್ಲ. ಇಂದು ನನಗೆ ಅವಕಾಶ ಸಿಕ್ಕಿದ್ದು ಹಿತ ಎನಿಸಿತು ಹಾಗೂ ಉತ್ತಮ ರನ್ ಕಲೆಹಾಕಲು ಸಾಧ್ಯವಾಯಿತು. ನಾವು 250 ರನ್ ಗಳಿಸಬೇಕೆಂದು ಲೆಕ್ಕಾಚಾರ ಹಾಕಿದ್ದೆ, ಕೇದಾರ್ ಜಾಧವ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಅದನ್ನು ದಾಖಲಿಸಿದೆವು’ ಎಂದು ಹೇಳಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಸರಿಸುಮಾರು 2 ವರ್ಷಗಳ ಬಳಿಕ ಏಕದಿನ ಕ್ರಿಕೆಟ್'ನಲ್ಲಿ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

Follow Us:
Download App:
  • android
  • ios