ಗ್ರ್ಯಾನ್'ಸ್ಲಾಮ್  ಟೂರ್ನಿಯಲ್ಲಿ ಐದು ಬಾರಿ ಫೈನಲ್ ತಲುಪಿ ಮುಗ್ಗರಿಸಿರುವ ಮರ್ರೆ, ಆಸ್ಟ್ರೇಲಿಯಾ ಓಪನ್'ನಲ್ಲಿ ಚೊಚ್ಚಲ ಕಪ್ ಎತ್ತಿಹಿಡಿಯುವ ತವಕದಲ್ಲಿದ್ದಾರೆ.

ಮೆಲ್ಬೋರ್ನ್(ಜ.11): ಬ್ರಿಟನ್ನಿನ ಸ್ಟಾರ್ ಟೆನಿಸ್ ಆಟಗಾರ ಆ್ಯಂಡಿ ಮರ್ರೆ, ವರ್ಷದ ಮೊದಲ ಗ್ರಾಂಡ್ ಸ್ಲಾಮ್ ಟೂರ್ನಿಯಾದ ಆಸ್ಟ್ರೇಲಿಯಾ ಓಪನ್ ಪಂದ್ಯಾವಳಿಯಲ್ಲಿ ಪ್ರಭಾವಿ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೊಸ ವರ್ಷದ ಆರಂಭದಲ್ಲಿ ಪ್ರತಿಷ್ಠಿತ ‘ಸರ್’ ಗೌರವಕ್ಕೆ ಪಾತ್ರರಾಗಿದ್ದ ಮರ್ರೆ 2016ರಲ್ಲಿ 2ನೇ ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸಿದ ಶ್ರೇಯಕ್ಕೆ ಪಾತ್ರರಾಗಿದ್ದರು.

ಈ ಬಾರಿಯ ಆಸೀಸ್ ಓಪನ್‌'ನಲ್ಲಿ ವಿಶ್ವದ ನಂ.1 ಶ್ರೇಯಾಂಕದ ಮರ್ರೆಗೆ ಪ್ರಮುಖ ಎದುರಾಳಿ ಸರ್ಬಿಯಾದ ನೊವಾಕ್ ಜೊಕೊವಿಚ್ ಆಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮೆಲ್ಬೋರ್ನ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮರ್ರೆ, ಜೊಕೊವಿಚ್ ಎದುರು ಪರಾಭವ ಹೊಂದಿದರು.

ಗ್ರ್ಯಾನ್'ಸ್ಲಾಮ್ ಟೂರ್ನಿಯಲ್ಲಿ ಐದು ಬಾರಿ ಫೈನಲ್ ತಲುಪಿ ಮುಗ್ಗರಿಸಿರುವ ಮರ್ರೆ, ಆಸ್ಟ್ರೇಲಿಯಾ ಓಪನ್'ನಲ್ಲಿ ಚೊಚ್ಚಲ ಕಪ್ ಎತ್ತಿಹಿಡಿಯುವ ತವಕದಲ್ಲಿದ್ದಾರೆ.