ಈ ಮೊದಲು ಕೇವಲ ಎರಡು ಪಂದ್ಯಗಳಿಗೆ ಮಾತ್ರ ಕೆರಿಬಿಯನ್ ತಂಡ ಪ್ರಕಟ ಮಾಡಲಾಗಿತ್ತು.
ಜಮೈಕಾ (ಆ್ಯಂಟಿಗಾ): ಭಾರತ ವಿರುದ್ಧದ ಏಕದಿನ ಸರಣಿಯ ಕೊನೆ ಮೂರು ಪಂದ್ಯಗಳಿಗೆ ವೆಸ್ಟ್‌ಇಂಡೀಸ್ ತಂಡ ಪ್ರಕಟಗೊಂಡಿದ್ದು, ಯುವ ಆಟಗಾರರಾದ ಕೈಲ್ ಹೋಪ್ ಹಾಗೂ ಸುನಿಲ್ ಅಂಬ್ರಿಸ್'ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಜೋನಾಥನ್ ಕಾರ್ಟರ್ ಹಾಗೂ ಕೆಸ್ರಿಕ್ ವಿಲಿಯಮ್ಸ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಈ ಮೊದಲು ಕೇವಲ ಎರಡು ಪಂದ್ಯಗಳಿಗೆ ಮಾತ್ರ ಕೆರಿಬಿಯನ್ ತಂಡ ಪ್ರಕಟ ಮಾಡಲಾಗಿತ್ತು.
ಮೊದಲ ಪಂದ್ಯ ಮಳೆಗೆ ಬಲಿಯಾಗಿದ್ದರೆ, 2ನೇ ಪಂದ್ಯದಲ್ಲಿ 105ರನ್'ಗಳ ಗೆಲುವು ಸಾಧಿಸಿ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತ್ತು.
