ಕೋವ್ಲೊನ್ (ಹಾಂಕಾಂಗ್): ಭಾರತದ ತಾರಾ ಆಟಗಾರರಾದ ಕಿದಂಬಿ ಶ್ರೀಕಾಂತ್ ಮತ್ತು ಸಮೀರ್ ವರ್ಮಾ, ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡಿದ್ದಾರೆ.ಇದರೊಂದಿಗೆ ಭಾರತದ ಸವಾಲು ಅಂತ್ಯವಾಗಿದೆ. 

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್‌ನಲ್ಲಿ ಶ್ರೀಕಾಂತ್, ಜಪಾನ್‌ನ ಕೆಂಟ ನಿಶಿಮೊಟೊ ವಿರುದ್ಧ 17-21, 13-21 ನೇರ ಗೇಮ್‌ಗಳಲ್ಲಿ ಸೋತರು. ನಿಶಿಮೊಟೊ ವಿರುದ್ಧದ 4 ಬಾರಿ
ಮುಖಾಮುಖಿಯಲ್ಲಿ ಶ್ರೀಕಾಂತ್ ಇದೇ ಮೊದಲ ಸಲ ಸೋಲು ಕಂಡರು. 

ಮತ್ತೊಂದು ಎಂಟರಘಟ್ಟದ ಪಂದ್ಯದಲ್ಲಿ ಸಮೀರ್ ವರ್ಮಾ, ಹಾಂಕಾಂಗ್ ಆಟಗಾರ ಲೀ ಚಿಯುಕ್ ಯು ವಿರುದ್ಧ 15-21, 21-19, 11-21 ಗೇಮ್‌ಗಳಲ್ಲಿ ಪರಾಭವ ಹೊಂದುವ ಮೂಲಕ ಟೂರ್ನಿಯಲ್ಲಿ ಭಾರತದ ಸವಾಲು ಕೊನೆಗೊಂಡಿತು.