Asianet Suvarna News Asianet Suvarna News

ಆರ್'ಸಿಬಿಗೆ ಬೃಹತ್ ಗುರಿ ನೀಡಿದ ಸನ್'ರೈಸರ್ಸ್

ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲಿಂಗ್ ಆಯ್ದುಕೊಂಡಿತು.

Holders SRH set imposing target of 208 for RCB

ಹೈದರಾಬಾದ್(ಏ.05): ಟಿ20 ಸ್ಪೆಷಲಿಸ್ಟ್'ಗಳೆಂದೇ ಗುರುತಿಸಿಕೊಂಡಿರುವ ಮೋಯಿಸ್ ಹೆನ್ರಿಕೇಸ್ ಹಾಗೂ ಯುವರಾಜ್ ಸಿಂಗ್ ಸ್ಪೋಟಕ ಅರ್ಧಶತಕಗಳ ನೆರವಿನಿಂದ 10ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಸನ್'ರೈಸರ್ಸ್ ಹೈದರಾಬಾದ್ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 207 ರನ್'ಗಳ ಬೃಹತ್ ಮೊತ್ತ ಕಲೆಹಾಕಿದೆ.

ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೌಲಿಂಗ್ ಆಯ್ದುಕೊಂಡಿತು. ಆರಂಭದಲ್ಲೇ ಸನ್'ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ವಿಕೆಟ್ ಪಡೆದು ಅಂಕಿತ್ ಚೌಧರಿ ಭರವಸೆ ಮೂಡಿಸಿದರು. ಆದರೆ ನಂತರದಲ್ಲಿ ಕಳಪೆ ಕ್ಷೇತ್ರರಕ್ಷಣೆಯ ಲಾಭ ಪಡೆದ ಹೈದರಾಬಾದ್ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಸಫಲವಾಯಿತು.

23 ಎಸೆತಗಳಲ್ಲೇ ಅರ್ಧಶತಕ ಸಿಡಿಸಿ ಐಪಿಎಲ್'ನಲ್ಲಿ ವೈಯುಕ್ತಿಕ ಅತಿವೇಗದ ಅರ್ಧಶತಕ(62) ಪೂರೈಸುವಲ್ಲಿ ಯುವರಾಜ್ ಸಿಂಗ್ ಯಶಸ್ವಿಯಾದರೆ, ಮೋಯಿಸ್ ಹೆನ್ರಿಕೇಸ್(52) ಅರ್ಧಶತಕ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು. ಇನ್ನು ಕೆಳಕ್ರಮಾಂಕದಲ್ಲಿ ದೀಪಕ್ ಹೂಡಾ ಹಾಗೂಬೆನ್ ಕಟ್ಟಿಂಗ್ಸ್ ತಂಡದ ಮೊತ್ತವನ್ನು 200ರ ಗಡಿದಾಟಿಸುವಲ್ಲಿ ಸಫಲರಾದರು.

ಆರ್'ಸಿಬಿ ಪರ ತೈಮಲ್ ಮಿಲ್ಸ್, ಅಂಕಿತ್ ಚೌಧರಿ, ಯಜುವೇಂದ್ರ ಚಾಹಲ್ ಮತ್ತು ಸ್ಟುವರ್ಟ್ ಬಿನ್ನಿ ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಸನ್ ರೈಸರ್ಸ್ ಹೈದರಾಬಾದ್: 207/4

ಯುವರಾಜ್ ಸಿಂಗ್: 62

ಮೋಯಿಸ್ ಹೆನ್ರಿಕೇಸ್: 52

ಯಜುವೇಂದ್ರ ಚಾಹಲ್:22/1   

Follow Us:
Download App:
  • android
  • ios