ವೀಷ್ಮಾ ಚೆಂಗಪ್ಪ ಜೊತೆ ಹಾಕಿ ಆಟಗಾರ ನಿತಿನ್ ತಿಮ್ಮಯ್ಯ ನಿಶ್ಚಿತಾರ್ಥ

First Published 18, Jun 2018, 10:16 AM IST
Hockey player Nithin thimmaiah got Engaged
Highlights

ಭಾರತೀಯ ಹಾಕಿ ತಂಡದ ಪ್ರಮುಖ ಆಟಾಗರ, ಕೊಡಗಿನ ನಿತಿನ್ ತಿಮ್ಮಯ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿತಿನ್ ನಿಶ್ಚಿತಾರ್ಥ ಹೇಗಿತ್ತು. ಇಲ್ಲಿದೆ ವಿವರ

ವಿರಾಜಪೇಟೆ(ಜೂ.18): ಟೀಂ ಇಂಡಿಯಾ ಹಾಕಿ ಆಟಗಾರ, ಕೊಡಗಿನ ಮೇಕರಿರ ನಿತಿನ್ ತಿಮ್ಮಯ್ಯ ಅವರ ನಿಶ್ಚಿತಾರ್ಥ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ವೀಷ್ಮಾ ಚಂಗಪ್ಪ ಅವರೊಂದಿಗೆ ನಡೆದಿದೆ. ವಿರಾಜಪೇಟೆಯಲ್ಲಿ ಕೊಡವ ಸಂಪ್ರದಾಯದಂತೆ ನಡೆದ ಅದ್ಧೂರಿ ನಿಶ್ಚಿತಾರ್ಥ ನೇರವೇರಿತು.

ಮಧ್ಯಾಹ್ನ 12 ಗಂಟೆಗೆಯ ಶುಭ ಘಳಿಗೆಯಲ್ಲಿ ನಿತಿನ್ ಹಾಗೂ ವೀಷ್ಮ ಪರಸ್ಪರ ಉಂಗುರ ಬದಲಾಯಿಸಿಕೊಂಡರು. ಈ ವೇಳೆ ವೀಷ್ಮಾ ಅವರು ನಿತಿನ್‌ಗೆ ಕೊಡವ ಸಂಪ್ರದಾಯ ಬಿಂಬಿಸುವ ಪಿಚೆ ಕತ್ತಿ ಹಾಗೂ ಉಡುಗೆಗೆ ತೊಡಿಸಿದರು. ಇದೇ  ಡಿಸೆಂಬರ್ 24 ಮತ್ತು 25 ರಂದು ಬಾಳುಗೋಡಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದ ಸಾಂಸ್ಕೃತಿಕ ಕೇಂದ್ರದಲ್ಲಿ ವಿವಾಹ ನೇರವೇರಲಿದೆ. 

ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಹಾಕಿ ಆಟಗಾರರಾದ ವಿ.ಎಸ್. ರಘುನಾಥ್, ಎಸ್.ಕೆ. ಉತ್ತಪ್ಪ, ನಿಕ್ಕಿನ್ ತಿಮ್ಮಯ್ಯ, ವಿ.ಎಸ್.ವಿನಯ್, ಚೀಯಣ್ಣ, ಪ್ರಧಾನ್ ಸೋಮಣ್ಣ, ಕೂರ್ಗ್ ಹಾಕಿ ಸಂಸ್ಥೆ ಅಧ್ಯಕ್ಷ ಪೈಕೇರ ಕಾಳಯ್ಯ ಹಾಗೂ ಓಮನ್ ದೇಶದ ಹಾಕಿ ಕೋಚ್ ಕೂತಂಡ ಪೂಣಚ್ಚ ಮತ್ತಿತರರು ಭಾಗವಹಿಸಿದ್ದರು. 

loader