ಜಾಹೀರಾತು ಪ್ರಕಾರ, ಡಿ.31, 2020ರ ವರೆಗೂ ಅಂದರೆ ಟೋಕಿಯೋ ಒಲಿಂಪಿಕ್ಸ್ ವರೆಗೂ ಒಪ್ಪಂದ ಅವಧಿ ಇರಲಿದೆ.

ನವದೆಹಲಿ(ಸೆ.05): ಪ್ರಧಾನ ಕೋಚ್ ರೋಲೆಂಟ್ ಓಲ್ಟ್‌'ಮನ್ಸ್ ವಜಾಗೊಳಿಸಿದ ಬಳಿಕ ಹಾಕಿ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಬಿಸಿಸಿಐ ಅನ್ನು ಮಾದರಿಯಾಗಿರಿಸಿಕೊಂಡು ಇದೇ ಮೊದಲ ಬಾರಿಗೆ ಹಾಕಿ ಇಂಡಿಯಾ ತನ್ನ ವೆಬ್‌'ಸೈಟ್‌'ನಲ್ಲಿ ಜಾಹೀರಾತು ನೀಡುವ ಮೂಲಕ ಅರ್ಜಿ ಆಹ್ವಾನಿಸಿದ್ದು, ಪಾರದರ್ಶಕವಾಗಿ ಕೋಚ್ ಆಯ್ಕೆ ನಡೆಸುವುದಾಗಿ ತಿಳಿಸಿದೆ.

ಜಾಹೀರಾತು ಪ್ರಕಾರ, ಡಿ.31, 2020ರ ವರೆಗೂ ಅಂದರೆ ಟೋಕಿಯೋ ಒಲಿಂಪಿಕ್ಸ್ ವರೆಗೂ ಒಪ್ಪಂದ ಅವಧಿ ಇರಲಿದೆ. ಇದಕ್ಕೂ ಮುನ್ನ 6 ತಿಂಗಳ ಪ್ರಾಯೋಗಿಕ ಅವಧಿಯಲ್ಲಿ ಕೋಚ್ ಹುದ್ದೆಗೇರುವವರು ಸಮಾಧಾನಕರ ಪ್ರದರ್ಶನ ನೀಡಬೇಕಿದೆ ಎಂದು ಹಾಕಿ ಇಂಡಿಯಾ ಸ್ಪಷ್ಟಪಡಿಸಿದೆ. ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಸೆ.15 ಕೊನೆಯ ದಿನಾಂಕವಾಗಿದೆ.

2018ರಲ್ಲಿ ನಡೆಯುವ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ತಂಡ ಉತ್ತಮ ಪ್ರದರ್ಶನ ತೋರಿ, ಒಲಿಂಪಿಕ್ಸ್‌'ಗೆ ಅರ್ಹತೆ ಪಡೆಯುವಂತೆ ನೋಡಿಕೊಳ್ಳುವುದು ಕೋಚ್ ಆಗುವವರ ಪ್ರಮುಖ ಜವಾಬ್ದಾರಿ ಎಂದು ಹಾಕಿ ಇಂಡಿಯಾ ತಿಳಿಸಿದೆ.