ಪರ್ತ್(ಮೇ.09): ಆಸ್ಪ್ರೇಲಿಯಾ ಪ್ರವಾಸದಲ್ಲಿರುವ ಭಾರತ ಪುರುಷರ ಹಾಕಿ ತಂಡ ಬುಧವಾರ ತನ್ನ ಮೊದಲ ಪಂದ್ಯದಲ್ಲಿ ಪಶ್ಚಿಮ ಆಸ್ಪ್ರೇಲಿಯಾ ಥಂಡರ್‌ಸ್ಟಿಕ್ಸ್‌ ತಂಡದ ವಿರುದ್ಧ 2-0 ಗೋಲುಗಳಿಂದ ಜಯಗಳಿಸುವ ಮೂಲಕ ಶುಭಾರಂಭ ಮಾಡಿದೆ. 

 

 

ಇಲ್ಲಿ ನಡೆದ ಪಂದ್ಯದಲ್ಲಿ ಭಾರತ ಪರ ಬೀರೇಂದ್ರ ಲಾಕ್ರಾ (23ನೇ ನಿ.) ಹಾಗೂ ಹರ್ಮನ್‌ಪ್ರೀತ್‌ ಸಿಂಗ್‌ (50ನೇ ನಿ.) ಗೋಲು ಬಾರಿಸಿದರು. ಭಾರತ ತಂಡ ಆಸ್ಪ್ರೇಲಿಯಾ ರಾಷ್ಟ್ರೀಯ ತಂಡದ ವಿರುದ್ಧ ಮೇ 15 ಹಾಗೂ 17ರಂದು ಪಂದ್ಯಗಳನ್ನು ಆಡಲಿದ್ದು, ಆ ಸರಣಿಗೆ ಪೂರ್ವಭಾವಿ ತಯಾರಿ ನಡೆಸುತ್ತಿದೆ. ಈ ಸರಣಿಗೂ ಮುನ್ನ ಮೇ 10ರಂದು ಆಸ್ಪ್ರೇಲಿಯಾ ‘ಎ’ ವಿರುದ್ಧ ಪಂದ್ಯವನ್ನು ಆಡಲಿದೆ.